ಎಸ್‌ಎಚ್‌ಆರ್‌ಎಫ್ ಯೋಗಬನಕ್ಕೆ ಪ್ರಶಸ್ತಿಯ ಗರಿ

award
ಕೋಟದ ಮೂಡುಗಿಳಿಯಾರಿನಲ್ಲಿರುವ ಎಸ್‌ಎಚ್‌ಆರ್‌ಎಫ್ ಯೋಗಬನದ ಸಿಇಒ ಡಾ.ವಿವೇಕ ಉಡುಪ (ಯೋಗಿಜೀ ), ಸಿಎಮ್‌ಒ ಡಾ.ಮಾನಸ ಉಡುಪ ನ್ಯಾಷನಲ್ ಹೆಲ್ತ್ ಅವಾರ್ಡ್ ಪಡೆದುಕೊಂಡರು.
Published on

ಕೋಟ: ಕೋಟದ ಮೂಡುಗಿಳಿಯಾರಿನಲ್ಲಿರುವ ಎಸ್‌ಎಚ್‌ಆರ್‌ಎಫ್ ಯೋಗಬನ ನ್ಯಾಷನಲ್ ಹೆಲ್ತ್ ಅವಾರ್ಡ್ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯುಷ್ ಟಿವಿ ವತಿಯಿಂದ ನಡೆದ ವಿಶೇಷ ಸಮಾರಂಭದಲ್ಲಿ ಯೋಗಬನಕ್ಕೆ ಆಯುಷ್ ಟಿವಿ ನ್ಯಾಷನಲ್ ಹೆಲ್ತ್ ಅವಾರ್ಡ್ -2024 ನೀಡಿ ಗೌರವಿಸಲಾಯಿತು.

ನಟಿ ಪ್ರಿಯಾಂಕಾ ಉಪೇಂದ್ರರವರಿಂದ ಯೋಗಬನದ ಸಿಇಒ ಡಾ.ವಿವೇಕ ಉಡುಪ (ಯೋಗಿಜೀ ) ಹಾಗೂ ಸಿಎಂಒ ಡಾ.ಮಾನಸ ಉಡುಪ ಪ್ರಶಸ್ತಿ ಸ್ವೀಕರಿಸಿದರು. ಆಯುಷ್ ಟಿವಿ ಚೇರ್ಮನ್ ಡಾ.ವಿ.ಆರ್.ಗೌರಿ ಶಂಕರ್ ಮತ್ತು ವೈಸ್ ಚೇರ್ಮನ್ ಡಾ.ಆರ್.ಅರುಣಾಚಲಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net