‘ಪರೀಕ್ಷೆಯನ್ನು ಹಬ್ಬವೆಂದು ಸಂಭ್ರಮಿಸಿ’ ಕಾರ್ಯಕ್ರಮ

EXAM
ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯನ್ನು ಹಬ್ಬವೆಂದು ಸಂಭ್ರಮಿಸಿ ಎಂಬ ಪ್ರೇರಣದಾಯಕ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಚೇತನ್ ರಾಮ್ ಆರ್.ಎ. ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.
Published on

ಹೆಬ್ರಿ: ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆಯನ್ನು ಹಬ್ಬವೆಂದು ಸಂಭ್ರಮಿಸಿ’ ಪ್ರೇರಣದಾಯಕ ಕಾರ್ಯಕ್ರಮ ನಡೆಯಿತು.

ಶಿಕ್ಷಣ ತಜ್ಞ ಚೇತನ್‌ರಾಮ್ ಆರ್.ಎ ಮಾತನಾಡಿ, ಸರಿ ನಿಯಮ ಪಾಲಿಸಿಕೊಂಡು ಓದಿದರೆ ಎಲ್ಲರೂ ಸಾಧಿಸಿ ಅಂಕ ಗಳಿಸಬಹುದು. ವಿದ್ಯಾರ್ಥಿಗೆ ವೈಯಕ್ತಿಕ ಅಧ್ಯಯನದಲ್ಲಿ 21 ಅಧ್ಯಯನ ಸಮಸ್ಯೆಗಳಿರುತ್ತವೆ. ಏಕೆ ಓದಬೇಕು, ಎಷ್ಟು ಓದಬೇಕು, ಎಷ್ಟು ಬರೆಯಬೇಕು, ಹೇಗೆ ಬರೆಯಬೇಕು, ಓದುವ, ಬರೆಯುವ ವೇಗ ಎಷ್ಟಿರಬೇಕು ಎಂಬುದನ್ನು ಅರಿತುಕೊಂಡಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ ಎಂದರು.

ಪಾಂಡುರಂಗ ರಮಣನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಗುರುದಾಸ್ ಶೆಣೈ, ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಅರುಣ್ ಎಚ್.ವೈ., ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗಡೆ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ್ ನಾಯಕ್ ಸೀತಾನದಿ, ಜಿಲ್ಲಾ ಮುಖ್ಯ ಸಂಯೋಜಕ ಟಿ.ಜಿ. ಆಚಾರ್ಯ, ಲಯನ್ ಪ್ರಾಂತ್ಯಾಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ಲಯನ್ಸ್ ರಘುರಾಮ ಶೆಟ್ಟಿ, ಆಶಾ ಭುಜಂಗ ಶೆಟ್ಟಿ, ಪ್ರಸಾದ್ ರೈ ಬೆಳ್ವೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net