

ಕುಶಾಲನಗರ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಕೊಡುವ ಉತ್ತಮ ಕಾರ್ಯ ನಿರ್ವಹಣೆ ಪ್ರಶಸ್ತಿಯು ಈ ಬಾರಿ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಲಭಿಸಿದ್ದು, ಬುಧವಾರ ಮಡಿಕೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್ ಅವರಿಗೆ ಪ್ರಶಸ್ತಿ ಹಸ್ತಾಂತರ ಮಾಡಲಾಯಿತು.
ಕೆಡಿಸಿಸಿ ಸಹಕಾರ ಸಂಘಗಳ ನಿಯಮದ ಅನುಸಾರವಾಗಿ ಹೂಡಿಕೆಯ ಬಂಡವಾಳ, ಸದಸ್ಯತ್ವ ಹೆಚ್ಚಳ, ವಾರ್ಷಿಕ ಆದಾಯ, ಸಂಘದ ಶ್ರೇಣಿಯ ಅಂಶ, ಠೇವಣಿಯ ಸಂಗ್ರಹದ ಮಟ್ಟ, ಸುಸ್ಥಿ ಸಾಲ ವಸೂಲಾತಿ, ಲಾಭ ನಷ್ಟದ ಲೆಕ್ಕಾಚಾರ ಮತ್ತು ಲಾಭಾಂಶದ ಹೆಚ್ಚಳದ ಆಧಾರದಲ್ಲಿ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ ಲಭಿಸಿದೆ ಎಂದು ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್ ವಿಜಯವಾಣಿಗೆ ತಿಳಿಸಿದರು.