ನಿಷ್ಠೆಯಿಂದ ಕಾಯಕ ಮಾಡುವವರೆಲ್ಲರೂ ಸಾಧಕರು

Sudhee_06_Hallur_Hanumanthappa_Varalaxmamma_State_Award_@_Ka_Sa_Pa_Kuvempu_Hall (10)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಜೀವನದಲ್ಲಿ ಸ್ವಾರ್ಥ, ಲಾಭವಿಲ್ಲದೆ ಇತರರಿಗಾಗಿ ಬದುಕುವವರು, ದಿನನಿತ್ಯದ ಕಾಯಕವನ್ನು ನಿಷ್ಠೆಯಿಂದ ಮಾಡುವವರೆಲ್ಲರೂ ಸಾಧಕರು ಎಂದು ಐಎಎಸ್​ ನಿವೃತ್ತ ಅಧಿಕಾರಿ ಸಿ. ಸೋಮಶೇಖರ್​ ಹೇಳಿದ್ದಾರೆ.

ಸಮರ್ಥ ಸಾಹಿತ್ಯ ಮತ್ತು ಸಾಂಸತಿಕ ಪ್ರತಿಷ್ಠಾನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್​ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಳ್ಳೂರು ಹನುಮಂತಪ್ಪ, ವರಮಹಾಲಕ್ಷ$್ಮಮ್ಮ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸೇವೆಯೇ ಪ್ರಕೃತಿಯ ಮೂಲ ಸಂದೇಶವಾಗಿದ್ದು, ನಮ್ಮ ಪಾಲಿಗೆ ಬರುವ ಎಲ್ಲ ಕೆಲಸಗಳನ್ನು ನಿರ್ಮಲ, ರ್ನಿಲಿಪ್ತ ಹಾಗೂ ಸೇವಾ ಮನೋಭಾವದಿಂದಲೇ ಮಾಡಬೇಕು. ಅಂತಹ ಅನೇಕ ಸಾಧಕರು ನಮ್ಮ ನಡುವೆ ಇದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಇನ್ನೊಬ್ಬರ ಸಾಧನೆಯನ್ನು ಗುರುತಿಸುವವರ ಮನಸ್ಸು ದೊಡ್ಡದು ಎಂದು ತಿಳಿಸಿದರು.

ಸಮರ್ಥ ಸಾಹಿತ್ಯ ಮತ್ತು ಸಾಂಸತಿಕ ಪ್ರತಿಷ್ಠಾನ ಅಧ್ಯಕ್ಷ ಎಸ್​.ಆರ್​. ವಿಜಯ ಸಮರ್ಥ ಮಾತನಾಡಿ, ಜನರಿಗೆ ಮನರಂಜನೆ ಮೂಲಕ ಅವರ ಮನಸ್ಸನ್ನು ಹಗುರಗೊಳಿಸುವುದು ಸಾಂಸತಿಕ ಕಾರ್ಯಕ್ರಮಗಳು. ಅದನ್ನು ಯಾರು ಮುಂದಾಳತ್ವ ವಹಿಸಿ ಮಾಡುತ್ತಾರೋ ಅವರನ್ನು ಸಾಂಸತಿಕ ರಾಯಭಾರಿ ಎನ್ನುತ್ತಾರೆ. ಸಮಾಜದಲ್ಲಿ ಅಂಥ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ಎಲ್ಲರ ಕರ್ತವ್ಯ ಎಂದರು.

"ವಿಜಯವಾಣಿ'ಯಿಂದ ಪುರಸತರ ಆಯ್ಕೆ:

ರಾಜ್ಯ ಮಟ್ಟದ ಈ ಪ್ರಶಸ್ತಿಗೆ ಎಲ್ಲ ಜಿಲ್ಲೆಗಳಿಂದ ವಿವಿಧ ಸಾಧಕರನ್ನು "ವಿಜಯವಾಣಿ' ಪತ್ರಿಕೆ ಗುರುತಿಸಿ ಆಯ್ಕೆ ಮಾಡಿತ್ತು. ವಿವಿಧ ಕ್ಷೇತ್ರಗಳಲ್ಲಿ ನಿಸ್ಪ-----ೃಹ ಸೇವೆಗೈಯುತ್ತಿರುವ ನೈಜ ಸಾಧಕರನ್ನು ಪತ್ರಿಕೆಯು ಆಯ್ಕೆ ಮಾಡುವ ಮೂಲಕ ಸಮರ್ಥ ಸಾಹಿತ್ಯ ಮತ್ತು ಸಾಂಸತಿಕ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿಯ ನತೆಯನ್ನು ಹೆಚ್ಚಿಸಿದೆ ಎಂದು ಡಾ. ಸಿ. ಸೋಮಶೇಖರ್​ ಹಾಗೂ ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಶಿವಲಿಂಗೇಗೌಡ, "ವಿಜಯವಾಣಿ' ಸೀನಿಯರ್​ ಡೆಪ್ಯೂಟಿ ಎಡಿಟರ್​ ರಾವೇಂದ್ರ ಗಣಪತಿ, ಸಮಾಜ ಸೇವಕ ಡಾ. ಪಿ.ಎಚ್​. ರಾವೇಂದ್ರ ಶೆಟ್ಟಿ, ತುಮಕೂರಿನ ವಿಶ್ರಾಂತ ಪ್ರಾಂಶುಪಾಲ ಡಿ. ಸುಬ್ರಮಣ್ಯ ಶೆಟ್ಟಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಉತ್ತರದ ಬೆಳಗಾವಿ ಬಾಗಲಕೋಟೆಯಿಂದ ಹಿಡಿದು ದಣದ ಉಡುಪಿ, ದಣ ಕನ್ನಡ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಾಧನೆಗೈದ, ಮುರ್ಡೇಶ್ವರದ ಅರ್ಚಕರ ಆದಿಯಾಗಿ ಹಾವು ಹಿಡಿಯುವ ತಜ್ಞ, ಕ್ರೀಡೆ, ಉದ್ಯಮ, ಮಾಧ್ಯಮ ಇತ್ಯಾದಿ ಸಾಂಸತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ 38 ಸಾಧಕರಿಗೆ ಕಾರ್ಯಕ್ರಮದಲ್ಲಿ ಹಳ್ಳೂರು ಹನುಮಂತಪ್ಪ, ವರಮಹಾಲಕ್ಷ$್ಮಮ್ಮ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೃಷ್ಟಿಯ ಎಲ್ಲ ಜೀವಿಗಳ ಹೃನ್ಮಂದಿರದಲ್ಲಿ ಭಗವಂತನ ಇರುವಿಕೆಯ ಬಗ್ಗೆ ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ಹಾಗಿದ್ದರೆ ನಮ್ಮ ಕಣ್ಣೆದುರು ಇರುವವರೆಲ್ಲ ನಡೆದಾಡುವ ಗುಡಿಗಳು. ಎಲ್ಲರನ್ನೂ ಅದೇ ಭಾವದಿಂದ ಗೌರವಿಸುವುದು ಮುಖ್ಯ. ಈ ರೀತಿ ಮಾಡುವ ಸಾಧಕರ ಸನ್ಮಾನ ಪರೋಕ್ಷ$ವಾಗಿ ದೇವರಿಗೆ ಸಮರ್ಪಿಸಲ್ಪಡುತ್ತದೆ. >ಶ್ರೀ ಶಿವರುದ್ರ ಸ್ವಾಮೀಜಿ, ಬೇಲಿಮಠ ಮಹಾಸಂಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net