ಫಾಸ್ಟ್ ಫುಡ್, ಜಂಕ್ ಫುಡ್‌ಗಳನ್ನು ಕೈಬಿಡಿ

SANDOOR
ಸಂಡೂರು ತಾಲೂಕಿನ ತೋರಣಗಲ್‌ನ 1ನೇ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕುರಿತು ಅರಿವಿನ ಕಾರ್ಯಕ್ರಮ ಬುಧವಾರ ಏರ್ಪಡಿಸಲಾಗಿತ್ತು. ಬಿಎಚ್‌ಒ ಶಿವಪ್ಪ, ಪ್ರಮುಖರಾದ ಲಕ್ಷ್ಮೀದೇವಿ, ನಿರ್ಮಲಾ, ಲಲಿತಮ್ಮ, ಶಶಿರೇಖಾ, ರೇಷ್ಮಾ, ಶ್ರೀದೇವಿ, ಕಾಂಚನದೇವಿ, ಈರಮ್ಮ ಇತರರಿದ್ದರು.
Published on

ಸಂಡೂರು: ಪೂರ್ವಿಕರು ಕಾಲ ಕಾಲಕ್ಕನುಗುಣವಾಗಿ ಆಹಾರ ಪದಾರ್ಥಗಳನ್ನು ಉಪಯೋಗಿಸುತ್ತಿದ್ದುದರಿಂದ ಗಟ್ಟಿಮುಟ್ಟಾಗಿದ್ದರು ಎಂದು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.

ಪೌಷ್ಟಿಕ ಆಹಾರ

ತಾಲೂಕಿನ ತೋರಣಗಲ್‌ನ 1ನೇ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕುರಿತು ಅರಿವಿನ ಕಾರ್ಯಕ್ರಮ ಉದ್ದೇಶಿಸಿ ಬುಧವಾರ ಮಾತನಾಡಿದರು.

ಹಬ್ಬ ಹರಿದಿನಗಳಲ್ಲಿ ಶ್ರಾವಣ ಮಾಸದಲ್ಲಿ ಉಂಡಿ ಕಟ್ಟುವ ನೆಪದಲ್ಲಿ ಎಲ್ಲ ಬೇಳೆ ಕಾಳುಗಳು, ಏಕ ದಳ ಕಾಳುಗಳು, ಬೆಲ್ಲವನ್ನು ಉಪಯೋಗಿಸಿ ಪೌಷ್ಟಿಕ ಆಹಾರ ಸೇವಿಸುವಂತೆ ಮಾಡಿದ್ದಾರೆ.

ತರಕಾರಿ, ಸೊಪ್ಪು, ಹಣ್ಣು ಹಾಗೂ ಖನಿಜಾಂಶ ಇರುವ ಒಣ ಹಣ್ಣುಗಳನ್ನು ಬಳಸುವಂತೆ ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕು. ಫಾಸ್ಟ್ ಫುಡ್, ಜಂಕ್ ಫುಡ್, ಮನೆಯಲ್ಲೇ ತರಹೇವಾರಿ ಉಂಡಿ, ಕಿಚಡಿ, ತರಕಾರಿ ಮಿಶ್ರಿತ ರೊಟ್ಟಿಯಂತಹ ಅಡುಗೆ ಮಾಡಿಕೊಂಡು, ತುಪ್ಪ, ಮೊಸರಿನ ಜೊತೆಗೆ ಊಟ ಮಾಡಬೇಕು.

ಅನ್ನ ಬಸಿಯುವುದು, ತರಕಾರಿ ಕತ್ತರಿಸಿ ತೊಳೆಯುವುದು, ಕಾಳು ತರಕಾರಿಗಳನ್ನು ಕುದಿಸಿ ಬಸಿಯುವುದರಿಂದ ಪೋಷಕಾಂಶಗಳು ನಷ್ಟವಾಗುತ್ತವೆ ಎಂದರು.

ಗರ್ಭಿಣಿಯರಾದ ಭವಾನಿ, ವಸಂತ, ಅನುಷಾ ದೇವಿ, ಪ್ರಮುಖರಾದ ಕಿರಣ್ ಕುಮಾರಿ, ಅಂಗನವಾಡಿ ಕಾರ್ಯಕರ್ತೆ ಸ್ವಾತಿ, ಆಶಾ ಕಾರ್ಯಕರ್ತೆ ನೀಲಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net