ರಸ್ತೆಗೆ ತ್ಯಾಜ್ಯ ಎಸೆದು ಸಿಕ್ಕಿ ಬಿದ್ದ ರಿಕ್ಷಾವಾಲ: ದಂಡ ವಿಧಿಸಿದ ನೀರುಮಾರ್ಗ ಪಿಡಿಒ

gur-may-28-nirumarga
ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವ ರಿಕ್ಷಾದಲ್ಲಿ ತಂದು ತ್ಯಾಜ್ಯ ಎಸೆಯುತ್ತಿರುವುದು.
Published on

ಗುರುಪುರ: ನೀರುಮಾರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಡಂತಿಲ ಮತ್ತು ನೀರುಮಾರ್ಗ ಗ್ರಾಮಗಳ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಪಿಡಿಒ ಅಬೂಬಕ್ಕರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ವಾರ ಬೊಂಡಂತಿಲದ ರಸ್ತೆ ಬದಿಯಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯ ತೆರವು ಮಾಡುತ್ತಿದ್ದ ವೇಳೆ ತ್ಯಾಜ್ಯದಲ್ಲಿ ಪತ್ತೆಯಾದ ವಿಳಾಸ ಅನಯ್ವ ಸ್ಥಳೀಯ ನಿವಾಸಿಗೆ 5 ಸಾವಿರ ರೂ ದಂಡ ಹೇರಿದ್ದ ಪಿಡಿಒ, ಭಾನುವಾರ ರಸ್ತೆ ಬದಿಯಲ್ಲಿ ರಿಕ್ಷಾದಲ್ಲಿ ತಂದ ತ್ಯಾಜ್ಯ ಎಸೆದಾತನಿಗೂ ದಂಡ ವಿಧಿಸಿದ್ದಾರೆ. ರಸ್ತೆ ಬದಿಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾ ಫೂಟೇಜ್ ಆಧರಿಸಿ ಆಟೋದಲ್ಲಿದ್ದಾತನ ವಿರುದ್ಧ ದಂಡ ಹೇರಲಾಗಿದೆ.

ಇಲ್ಲಿನ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆ ಬದಿ ರಾತ್ರಿ ವೇಳೆ ವಾಹನಗಳಲ್ಲಿ ತಂದು ಕಸ ಎಸೆಯುತ್ತಾರೆ. ಎಲ್ಲೆಂದರಲ್ಲಿ ಕಸ ಎಸೆಯುವವರ ಬಗ್ಗೆ ಪಂಚಾಯಿತಿಗೆ ದೂರು ನೀಡಿದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸುಲಭವಾಗುತ್ತದೆ. ದೂರದಾರರ ವಿಳಾಸ ಗೌಪ್ಯವಾಗಿಡಲಾಗುವುದು. ಪರಿಸರದ ಅಂದಗೆಡಿಸುವ ಮಂದಿಯ ಪತ್ತೆಗಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ ಎಂದು ಪಿಡಿಒ ಅಬೂಬಕ್ಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net