

ತುಮಕೂರು: ಆಟೋಗಳನ್ನು ಕಳ್ಳತನ ಮಾಡಿ, ಅವುಗಳನ್ನೇ ಉಪಯೋಗಿಸಿಕೊಂಡು ರಾತ್ರಿ ವೇಳೆ ಅಂಗಡಿಯ ಬಾಗಿಲು ಹೊಡೆದು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳರೀಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತುಮಕೂರಿನ ಕೋತಿತೋಪು ನಿವಾಸಿ ಯಲ್ಲಪ್ಪ(19), ಎಸ್.ಸುದೀಪ್(20), ರಾಮ(20) ಬಂಧಿತರು. ಬಂಧಿತರಿಂದ 2.33 ಲಕ್ಷ ರೂ. ನಗದು, 1.50 ಲಕ್ಷ ರೂ. ಮೌಲ್ಯದ ಆಟೋ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಹೊರವಲಯದ ಯಲ್ಲಾಪುರ ವರ್ತಕರ ಸೌಹಾರ್ದ ಪತ್ತಿನ ಸಹಕಾರ ನಿಯಮಿತಕ್ಕೆ ಸಂಬಂಧಪಟ್ಟ 3.20 ಲಕ್ಷ ರೂ. ನಗದನ್ನು ಮಾತೃಶ್ರೀ ಮೆಡಿಕಲ್ ಸ್ಟೋರ್‌ನಿಂದ ಕಳವು ವಾಡಲಾಗಿತ್ತು. ಈ ಬಗ್ಗೆ ತುಮಕೂರು ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಈ ಹಿಂದಿನ 3 ಪ್ರಕರಣಗಳು ಹಾಗೂ ತುಮಕೂರು ನಗರ ಪೊಲೀಸ್ ಠಾಣೆಯ 1 ಪ್ರರಕಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಎಸ್‌ಐ ಎಂ.ಬಿ ಲಕ್ಷತ್ಮೃಯ್ಯ, ಚಂದ್ರಕಲಾ, ಗಂಗಮ್ಮ ಹಾಗೂ ಸಿಬ್ಬಂದಿ ಉಮೇಶ್, ನಯಾಜ್ ಪಾಷ, ಶಾಂತಕುವಾರ್, ದೇವರಾಜು ಆರೋಪಿಗಳ ಪತ್ತೆಯ ತಂಡದಲ್ಲಿದ್ದರು.