

ರಾಮನಗರ
ಕನ್ನಡ ನಾಡು ನುಡಿ ರಕ್ಷಣೆ ಹಾಗೂ ಬಳಕೆಯಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು ತಿಳಿಸಿದರು.
ರಾಮನಗರದ ಐಜೂರು ಸರ್ಕಲ್ನಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಸಂದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಆಟೋ ಚಾಲಕರು ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ನಾಡು, ನುಡಿ ಉಳಿವಿನ ಹಿಂದೆ ಆಟೋ ಚಾಲಕ ವರ್ಗದ ಶ್ರಮ ಅಧಿಕವಾಗಿದೆ. ಈ ವರ್ಗವೂ ನಿತ್ಯ ಕನ್ನಡ ಬಳಕೆ ಮಾಡುವುದರ ಜತೆಗೆ, ಅನುಷ್ಠಾನಕ್ಕೆ ತರುತ್ತಿದೆ ಎಂದರು.
ಸಾಹಿತಿಗಳು, ಕನ್ನಡ ಭಾಷಾ ಬೆಳವಣಿಗೆಗಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರೆ, ಆಟೋಚಾಲಕರು ನಿತ್ಯ ಜೀವನದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರುತ್ತಾರೆ. ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷ ಪೂರೈಸಿದೆ. ಹಾಗಾಗಿ ರಾಜ್ಯ ಸರ್ಕಾರ ಈ ವರ್ಷ ಸುವರ್ಣ ಸಂಭ್ರಮ ಆಚರಿಸಿದೆ.
ಈ ನಿಟ್ಟಿನಲ್ಲಿ ಆಟೋ ಚಾಲಕರು ವಿಶಿಷ್ಟವಾಗಿ ರಾಜ್ಯೋತ್ಸವನ್ನು ಆಚರಿಸುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಸಾರಿದ್ದಾರೆ. ಕನ್ನಡ ಸುದೀರ್ ಇತಿಹಾಸ ಹೊಂದಿದೆ. ಶಾಸಿಯ ಸ್ಥಾನಮಾನ ಪಡೆದುಕೊಂಡಿದೆ. ರಾಜ್ಯದ ಏಕೀರಣ ಹೋರಾಟವೂ ದೇಶದ ಸ್ವಾತಂತ್ರ್ಯ ಹೋರಾಟದ ಜತೆಗೆ ಆರಂಭ ಕಂಡಿತ್ತು. ಕನ್ನಡ ನಾಡಿಗಾಗಿ ಕನ್ನಡಿಗರು ಹಮ್ಮಿಕೊಂಡಿದ್ದ ಏಕೀಕರಣ ಹೋರಾಟವೂ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಕಾರಣವಾಗಿತ್ತು ಎಂದು ತಿಳಿಸಿದರು. ಕಾರ್ಯಕ್ರಮದ ನಂತರ ಆಟೋಚಾಲಕರು ನಗರದಾದ್ಯಂತ ಮೆರವಣಿಗೆ ನಡೆಸಿದರು.
ರಾಮನಗರ ತಾಲೂಕಿನಲ್ಲಿ 2 ರಿಂದ 3 ಸಾವಿರ ಆಟೋಚಾಲಕರು ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ರಾಮನಗರದ ಶಾಸಕರಾಗಿದ್ದ ವೇಳೆ ಸಿ.ಎಂ. ಲಿಂಗಪ್ಪ ಅವರು ಬಡ ಆಟೋಚಾಲಕರಿಗೆ ನಿವೇಶನ ನೀಡಿದ್ದರು. ಇದೇ ಮಾದರಿಯನ್ನು ರಾಮನಗರ ಶಾಸಕರಾಗಿರುವ ಇಕ್ಬಾಲ್ ಹುಸೇನ್ ಅವರು ಮಾಡಬೇಕು. ಇದರಿಂದ ಬಡ ಆಟೋಚಾಲಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಚುನಾವಣೆಗೂ ಮುನ್ನಾ ಶಾಸಕರು ಆಟೋಚಾಲಕರಿಗೆ ನಿವೇಶನ ನೀಡುವ ಭರವಸೆ ನೀಡಿದ್ದರು. ಅದನ್ನು ಈಡೇರಿಸಬೇಕೆಂದು ಮನವಿ ಮಾಡಿದರು.