ಕಾರು ಡಿಕ್ಕಿಯಾಗಿ ಆಟೋ ಚಾಲಕ ಸಾವು

Published on

ಮಾಗಡಿ: ಪಟ್ಟಣ ಸಮೀಪದ ಹೊಸಪಾಳ್ಯ ಬಳಿ ಮಂಗಳವಾರ ರಾತ್ರಿ ಇನೋವಾ ಹಾಗೂ ಆಟೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಆಟೋ ಚಾಲಕ ಮೃತಪಟ್ಟಿದ್ದಾನೆ.

ಕಲ್ಕೆರೆಯ ಆಟೋ ಚಾಲಕ ಸುರೇಶ್​(55) ಮೃತ. ಸ್ವಗ್ರಾಮ ಕಲ್ಕೆರೆಗೆ ತೆರಳುವ ವೇಳೆ ಹೊಸಪಾಳ್ಯ ಬಳಿ ಕುಣಿಗಲ್​ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಡಿಕ್ಕಿಯಿಂದ ಗಂಭೀರ ಗಾಯಗೊಂಡ ಸುರೇಶ್​ಗೆ ತೀವ್ರ ರಕ್ತಸ್ರಾವವಾಗಿದ್ದು, ಕೂಡಲೇ ಅವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಕಲ್ಕೆರೆ ಗ್ರಾಮದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಿತು. ಸುರೇಶ್​ಗೆ ಪತ್ನಿ, ಇಬ್ಬರು ಮಕ್ಕಳ್ಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net