ಆಟೋ ಚಾಲಕರೆ ಕನ್ನಡದ ನಿಜವಾದ ಕಟ್ಟಾಳು

21kkr1(11-24 kannada rajyotsava omni
ಕಿಕ್ಕೇರಿಯಲ್ಲಿ ವಿನಾಯಕ ಆಟೋ ಚಾಲಕರ ಸಂಘದವರು ಗುರುವಾರ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು. ರೇವತಿ, ಮೊಟ್ಟೆ ಮಂಜು, ರಘು, ಅನಂತ್, ರಘು, ಶ್ರೀಧರ್, ಶೇಖರ್, ರಂಗ, ಸ್ವಾಮಿ ಮತ್ತಿತರರಿದ್ದರು.
Published on

ಕಿಕ್ಕೇರಿ: ಆಟೋ ಚಾಲಕರೆ ನಿಜವಾದ ಕನ್ನಡದ ತೇರನ್ನು ಎಳೆಯುವ ಕಟ್ಟಾಳುಗಳು ಎಂದು ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ಅಭಿಪ್ರಾಯಪಟ್ಟರು.

ಇಲ್ಲಿನ ವಿನಾಯಕ ಒಮ್ನಿ ಮಾಲೀಕರ ಹಾಗೂ ಚಾಲಕರ ಸಂಘದವರು ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆಗೆ ಬಡತನವಿಲ್ಲ ಬೇಕಿರುವುದು ಹೃದಯ ಸಿರಿವಂತಿಕೆ ಎಂಬುದನ್ನು ತೋರಿಸಿಕೊಟ್ಟವರು ವಾಹನ ಚಾಲಕರು. ಕೇವಲ ನವೆಂಬರ್ ಕನ್ನಡಿಗರಾಗದೆ ವರ್ಷಪೂರ್ತಿ ಕನ್ನಡದ ಹಬ್ಬ ಆಚರಣೆ ಮಾಡಬೇಕಿದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಶಿಕ್ಷಣ ಮುಖ್ಯವಾಗಿರುವಷ್ಟೆ ಮನೆಯಲ್ಲಿ ಕನ್ನಡದ ವಾತಾವರಣ ಮೂಡಿಸಬೇಕು ಎಂದರು.

ಶ್ರಮಿಕ ಜೀವಿಗಳಾದ ಚಾಲಕರು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ ಆಗಿದೆ. ಇಲ್ಲಿನ ಹೃದಯ ಸಿರಿವಂತಿಕೆ ಮೆಚ್ಚಬೇಕಿದೆ. ಈ ಬಾರಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯಾಗಿದೆ. ಮೂರು ದಿನ ಡಿಸೆಂಬರ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕನ್ನಡದ ಮನಸ್ಸುಗಳು ಭಾಗವಹಿಸಲಿ ಎಂದರು.

ಸಮಾಜ ಸೇವಕ ಮೊಟ್ಟೆ ಮಂಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಲ್ಲಿದೆ. ಸ್ವಂತ ಹಣದಲ್ಲಿ ಮನೆಯ ಹಬ್ಬದಂತೆ ಆಚರಿಸುವ ಚಾಲಕರ ಮಾತೃಭಾಷೆ ಮರೆಯಲಾಗದು ಎಂದು ಸ್ಮರಿಸಿದರು.

ಕನ್ನಡಾಂಬೆ ಧ್ವಜ ಹಾರಿಸಿ, ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಸಿಹಿ ತಿನಿಸು, ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಆನೆಗೊಳ ರಘು, ಅಂಚೆಬೀರನಹಳ್ಳಿ ಅನಂತ್, ಗಂಗೇನಹಳ್ಳಿ ರಘು, ತೆಂಗಿನಘಟ್ಟ ಶ್ರೀಧರ, ರಂಗ, ನಿಂಬೆಹಳ್ಳಿ ಸ್ವಾಮಿ, ಶೇಖರ್, ರವಿ, ಗುಂಡ, ಲಕ್ಷ್ಮೀಶ, ಬಾಬಣ್ಣ, ರಘು, ಮೋಹನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net