ಆಡಿಯೋ ನಂದೇ ಎಂದ ಸುರೇಶಗೌಡ !

Suresh_Gowda11
Published on

ತುಮಕೂರು: ಭಾನುವಾರ ಬೆಳಗ್ಗೆ 11ಕ್ಕೆ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​ ತುಮಕೂರು ಗ್ರಾಮಾಂತರ ಕಾಂಗ್ರೆಸ್​ ಕಚೇರಿಯಲ್ಲಿ ಸಿಎಂ ವಿರುದ್ಧ ಕಪು$್ಪಬಾವುಟ ಪ್ರದರ್ಶಿಸಿದರೆ 1 ಲಕ್ಷ ರೂ., ಕೊಡುವ ಸುರೇಶಗೌಡರದ್ದು ಎನ್ನಲಾದ ಆಡಿಯೋ ರಿಲೀಸ್​ ಮಾಡುತ್ತಿದ್ದಂತೆ ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಯಿತು.

ಈ ಸ್ಫೋಟಕ ಆಡಿಯೋ ಬಾಂಬ್​ ಸುದ್ದಿವಾಹಿನಿ, ಜಾಲತಾಣಗಳಲ್ಲಿಯು ಕಾಡ್ಗಿಚ್ಚಿನಂತೆ ಹರಡಿತು. ಇದರ ಬೆನ್ನಲ್ಲೇ ಮಧ್ಯಾಹ್ನ 1.30ಕ್ಕೆ ಪ್ರವಾಸಿಮಂದಿರಕ್ಕೆ ದೌಡಾಯಿಸಿದ ಬಿಜೆಪಿ ಶಾಸಕ ಬಿ.ಸುರೇಶಗೌಡ ತರಾತುರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್​ರನ್ನು ಭೇಟಿ ಮಾಡಿ, ಸೋಮವಾರದ ಪ್ರತಿಭಟನೆ ಹಿಂಪಡೆಯುವುದಾಗಿ ಪ್ರಕಟಿಸಿದರು. ಆಡಿಯೋ ನಂದೆ ಎಂದು ಒಪ್ಪಿಕೊಂಡ ಸುರೇಶಗೌಡರು, ಸಚಿವ ಪರಮೇಶ್ವರ್​ ಅವರು ಅನುದಾನ ಕೊಡಿಸುವ ಆಶ್ವಾಸನೆ ಕೊಟ್ಟಿರುವ ಹಿನ್ನೆಲೆ ಸಿಎಂ ವಿರುದ್ಧದ ಕಪು$್ಪಪಟ್ಟಿ ಪ್ರದರ್ಶನದ ಪ್ರತಿಭಟನೆ ಕೈಬಿಡಲಾಗಿದೆ. ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ನಾನು ಭಾಗಿಯಾಗುತ್ತಿದ್ದು ನಮ್ಮ ಕಾರ್ಯಕರ್ತರಿಗೆ ಯಾರು ಕಪು$್ಪಪಟ್ಟಿ ಪ್ರದರ್ಶಿಸಿ, ಪ್ರತಿಭಟಿಸಿದಂತೆ ಕರೆಕೊಡುವುದಾಗಿ ಹೇಳಿ, ಆ ಮೂಲಕ ಸಿಎಂ ವಿರುದ್ಧ ಹೋರಾಟಕ್ಕೆ ಇತಿಶ್ರೀ ಹಾಡಿದರು.

ಅಂತರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣವಾದರೆ ಖುಷಿ ಪಡಬೇಕು. ಪ್ರಚಾರದ ಗೀಳಿಗಾಗಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸಿಎಂ ವಿರುದ್ಧ ಪ್ರತಿಭಟಿಸಿದರೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗಲಿದೆ ಎಂಬ ಹಂಬುತನದ ಕತೆಗೆ, ಕೆಎಸ್​ಸಿಎನಿಂದ ಕಮೀಷನ್​ ಸಿಗುವುದಿಲ್ಲವೆಂದು ಹತಾಶೆಯಿಂದ ಕ್ರಿಕೆಟ್​ ಸ್ಟೇಡಿಯಂ ನಿಮಾರ್ಣಕ್ಕೆ ಅಪಸ್ವರ ಎತ್ತುತ್ತಿದ್ದಾರೆ. ಡಿ.ಸಿ.ಗೌರಿಶಂಕರ್​ ಮಾಜಿ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರಗೆ ನಮ್ಮ ಹೋರಾಟ ಉದ್ದೇಶ ಮನವರಿಕೆಯಾಗಿದೆ. ಅನುದಾನದ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ನಿವಾರಿಸುವುದಾಗಿ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂಬ ನಮ್ಮ ನಿಲುವಿಗೆ ಸಹಮತ ಇರುವುದಾಗಿ ತಿಳಿಸಿದ್ದಾರೆ. ಅವರ ಭರವಸೆಗೆ ಮನ್ನಣೆ ಕೊಟ್ಟು ಸಿಎಂ ಭೇಟಿ ಸಮಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಬರಬಾರದೆಂದು ನಾವೆಲ್ಲ ಕೂಡಿಕೊಂಡು ಕಪು$್ಪಬಾವುಟ ಪ್ರದರ್ಶನ ಕೈಬಿಡುವ ರ್ನಿಣಯ ತೆಗೆದುಕೊಂಡಿದ್ದೇವೆ. ಬಿ.ಸುರೇಶಗೌಡ ಗ್ರಾಮಾಂತರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net