ಆಲಂಕಾರು ಅಟ್ಟಿ ಮಡಕೆ ಉತ್ಸವ

atti
Published on

ವಿಜಯವಾಣಿ ಸುದ್ದಿಜಾಲ ಕಡಬ

ಆಲಂಕಾರು ಗ್ರಾಮದ ಹಿಂದು ಜಾಗರಣ ವೇದಿಕೆ ಘಟಕ ಹಾಗೂ ಆಲಂಕಾರು ಮೊಸರು ಕುಡಿಕೆ ಉತ್ಸವ ಸಮಿತಿ ಜಂಟಿಯಾಗಿ ಆಲಂಕಾರಿನಲ್ಲಿ ಶ್ರೀಕೃಷ್ಣಾಷ್ಟಮಿ ಅಟ್ಟಿ ಮಡಕೆ ಒಡೆಯುವ ಉತ್ಸವ ನಡೆಯಿತು.

ಆಲಂಕಾರು ಪೇಟೆಯಲ್ಲಿ ಆಲಂಕಾರು ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ಉದ್ಘಾಟಿಸಿದರು. ಬಳಿಕ ಆಲಂಕಾರು ಪೇಟೆಯ ವಿವಿಧೆಡೆ ಅಟ್ಟಿ ಮಡಕೆ ಒಡೆಯುವ ಸ್ಪರ್ಧೆ ನಡೆಯಿತು.

ಬಳಿಕ ಶ್ರೀ ದುರ್ಗಾಂಬ ಕ್ರೀಡಾಂಗಣದಲ್ಲಿ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಹಿರಿಂಜ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಶ್ರೀ ಭಾರತಿ ಶಾಲಾ ಶಿಕ್ಷಕ ಚಂದ್ರಹಾಸ ಕುಂಟ್ಯಾನ ದಿಕ್ಸೂಚಿ ಭಾಷಣ ಮಾಡಿದರು. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪ್ಪೆ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸದಸ್ಯ ಜಗನ್ನಾಥ ರೈ ಬಳಂಪೋಡಿ ಅವರನ್ನು ಸನ್ಮಾನಿಸಲಾಯಿತು. ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ಮುದ್ದುಕೃಷ್ಣ ಸ್ಫರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಹಾಗೂ ಭಾಗವಹಿಸಿದ ಎಲ್ಲ ಪುಟಾಣಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜನಾರ್ದನ ಗೌಡ ಕಯ್ಯಪ್ಪೆ ವಂದಿಸಿದರು.

ಲಕ್ಷ್ಮೀ ಜನಾದರ್ನ ಕೇಪು ಪ್ರಥಮ

12 ತಂಡಗಳು ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಭಾವಹಿಸಿದ್ದು, ಪ್ರಥಮ ಸ್ಥಾನವನ್ನು ಲಕ್ಷ್ಮೀ ಜನಾದರ್ನ ಕೇಪು, ದ್ವಿತೀಯ ಸ್ಥಾನವನ್ನು ಬುಡೇರಿಯಾ ಹಾಗೂ ರೆಂಜಾಳ ತಂಡ ಹಂಚಿಕೊಂಡವು. ತೃತೀಯ ಸ್ಥಾನವನ್ನು ಕಲ್ಲುಗುಡ್ಡೆ , ಚತುರ್ಥ ಸ್ಥಾನವನ್ನು ಸುಳ್ಯ ತಮ್ಮದಾಗಿಸಿಕೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net