ಎಟಿಎಂ ಮಷಿನ್ ಒಡೆದು ಕಳ್ಳತನಕ್ಕೆ ಯತ್ನ

29SGN01
Published on

ಶಿಗ್ಗಾಂವಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಸಾಯಿ ಸೂಪರ್ ಮಾರ್ಕೆಟ್ ಹತ್ತಿರದ ಐಡಿಬಿಐ ಬ್ಯಾಂಕಿನ ಇಂಡಿಯಾ ನಂ.1 ಎಟಿಎಂ ಮಷಿನ್ ಅನ್ನು ಮುರಿದು ಅಲ್ಲಿರುವ ಸಿಸಿ ಕ್ಯಾಮರಾವನ್ನು ಒಡೆದು ಹಾಕಿ ಹಣ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ಪಟ್ಟಣದಲ್ಲಿ ನಡೆದಿದೆ.

ದಿನದ 24 ಗಂಟೆ ತೆರೆದಿರುವ ಈ ಎಟಿಎಂ ಇಲ್ಲಿನ ಸ್ಥಳೀಯರಿಗೆ, ಗ್ರಾಹಕರಿಗೆ ಅನುಕೂಲವಾಗಿತ್ತು. ಭಾನುವಾರ ಬೆಳಗ್ಗಿನ ಜಾವ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು, ಮಷಿನ್ ಮುರಿದು ಅಲ್ಲಿರುವ ಸಿಸಿ ಕ್ಯಾಮರಾ ಒಡೆದು ಹಾಕಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಆದರೆ, ಹಣ ಕಳ್ಳತನವಾದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ಬೆಳಗಾವಿ ಮುಖ್ಯ ಕಚೇರಿಯ ತಾಂತ್ರಿಕ ವರ್ಗದವರು ಬಂದ ನಂತರ ಹಣದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್​ಐ ಕೆ.ಎಸ್. ಹಳ್ಳಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net