ಲಿಂಗಾಯತ ನೌಕರರ ಮೇಲೆ ಹಲ್ಲೆಗೆ ಖಂಡನೆ : ಹಲ್ಲೆಕೋರರ ಬಂಧಿಸದಿದ್ದರೆ ಹೋರಾಟ ಅರುಣಕುಮಾರ ಪಾಟೀಲ್ ಎಚ್ಚರಿಕೆ

DCM_1535
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಹೆಲ್ತ್ ಇನ್‌ಸ್ಪೆಕ್ಟರ್ ಧನಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದು ಹೇಯ ಕೃತ್ಯವಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ  ವೀರಶೈವ-ಲಿಂಗಾಯತರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದ  ಜರುಗಿದ ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ಉಪ ಆಯುಕ್ತರ ಕಚೇರಿಯಲ್ಲಿ ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಮುದಾಯದ ಧನಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು,
ಸಮುದಾಯದ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಮೇಲೆ ಹಲ್ಲೆ  ಮಾಡಿದ್ದನ್ನು ಖಂಡಿಸಿದರು. ಕೂಡಲೇ ಹಲ್ಲೆಕೋರರ ಬಂಧಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ್ ಮಳಖೇಡ,  ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ, ಮುಖಂಡರಾದ ಸಂಗಮೇಶ ನಾನನಹಳ್ಳಿ, ಮಂಜು ರೆಡ್ಡಿ,  ಚಂದ್ರಶೇಖರ ತಳ್ಳಳ್ಳಿ, ರವಿ ಬಿರಾದಾರ, ಶಿವಪುತ್ರಪ್ಪ ಡೆಂಕಿ, ಜಗನ್ನಾಥ ಪಟ್ಟಣಶಟ್ಟಿ, ಶರಣು ಖಾನಾಪುರ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net