

ಕೂಡ್ಲಿಗಿ: ತುಮಕೂರಿನಲ್ಲಿ ವಕೀಲರ ಸಂಘದ ಸದಸ್ಯ ರವಿಕುಮಾರ ಮೇಲೆ ಹಲ್ಲೆ ನಡೆಸಿದ ಸಿಪಿಐ ದಿನೇಶ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಎಂ.ರೇಣುಕಾಗೆ ವಕೀಲರ ಸಂಘ ಗುರುವಾರ ಮನವಿ ಸಲ್ಲಿಸಿತು.
ಇದನ್ನೂ ಓದಿ: ವಕೀಲರ ಮೇಲೆ ಸಿಪಿಐ ಹಲ್ಲೆ
ರೈಲ್ವೆ ಇಲಾಖೆಗೆ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ತುಮಕೂರು ವಕೀಲ ರವಿಕುಮಾರ ಹಾಗೂ ಅವರ ತಂದೆಯ ಮೇಲೆ ನಗರ ಸಿಪಿಐ ದಿನೇಶ ಕುಮಾರ್ ಹಲ್ಲೆ ನಡೆಸಿ ಮನಸೋ ಇಚ್ಛೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಿಪಿಐ ದೌರ್ಜನ್ಯ ಖಂಡನೀಯವಾಗಿದ್ದು, ತಕ್ಷಣವೇ ಬಂಧಿಸಿ ಸೇವೆಯಿಂದ ಅಮಾನತುಗೊಳಿಸಬೇಕು. ಅವರೊಂದಿಗಿದ್ದ ಪೋಲಿಸ್ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರಾದ ಆರ್.ರಮೇಶ, ಜಿ.ಹೊನ್ನೂರಪ್ಪ, ಕೆ.ಎಂ.ಕಾಟಯ್ಯ, ಜಿ.ಎಂ.ಮಲ್ಲಿಕಾರ್ಜುನಯ್ಯ, ಅಂಗಡಿ ರವಿ, ಪ್ರಕಾಶ, ಸಿ.ವಿರೂಪಾಕ್ಷಪ್ಪ, ನಾಗರಾಜ, ನಾರಪ್ಪ, ಡಿ.ಎಚ್.ದುರುಗೇಶ, ಮಲ್ಲಿಕಾರ್ಜುನ, ಪ್ರಭುಸ್ವಾಮಿ ಇತರರಿದ್ದರು.