ತುಮಕೂರು: ರೈಲ್ವೆ ಯೋಜನೆಗೆ ಜಮೀನು ಸ್ವಾಧಿನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಆದ ವಕೀಲ ರವಿಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಿರುವ ತುಮಕೂರು ನಗರ ಠಾಣೆ ಸಿಪಿಐ ದಿನೇಶ್ಕುಮಾರ್ರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನ್ಯಾಯಾಲಯದ ಕಲಾಪದಿಂದ ಕೆಲಕಾಲ ದೂರವುಳಿದು ವಕೀಲರು ಪ್ರತಿಭಟಿಸಿದ ಪ್ರಸಂಗ ನಡೆಯಿತು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದ ವಕೀಲರ ಭವನದ ಮುಂದೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಕೆಂಪರಾಜು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಕೀಲರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಘೋಷಣೆಗಳನ್ನು ಕೂಗಿದರಲ್ಲದೆ, ರವಿಕುಮಾರ್ ಮೇಲೆ ಹಲ್ಲೆ ನಡೆಸಿರುವ ಸಿಪಿಐ ದಿನೇಶ್ ಕುಮಾರ್ರನ್ನು ಅಮಾನತಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಕಾರನ್ನು ಅಡ್ಡಗಟ್ಟಿದ ವಕೀಲರು, ಕೂಡಲೇ ಆರೋಪಿತ ಅಧಿಕಾರಿ ವಿರುದ್ಧ ಎ್ಐಆರ್ ದಾಖಲಿಸಬೇಕು ಹಾಗೂ ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಘೋಷಣೆಗಳನ್ನು ಕೂಗಿದರಲ್ಲದೆ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಪ್ರತಿಭಟನಾಸ್ಥಳದಲ್ಲೇ ಕಾರು ಬಿಟ್ಟು ಎಸ್ಪಿ ಅಲ್ಲಿಂದ ಹೊರನಡೆದರು.
ಮನಸೋ ಇಚ್ಛೆ ಥಳಿತ ಆರೋಪ: ನಗರದ ಹೊರವಲಯದ ಹೊನ್ನೇನಹಳ್ಳಿಯಲ್ಲಿ ರೈಲ್ವೆ ಯೋಜನೆಗೆ ಜಮೀನು ಸ್ವಾಧಿನಪಡಿಸಿಕೊಂಡಿರುವ ಸಂಬಂಧಪಟ್ಟ ಅಧಿಕಾರಿ ಪ್ರಶ್ನಿಸಿದ ಜಮೀನು ಮಾಲೀಕರೂ ಆಗಿದ್ದ ವಕೀಲ ರವಿಕುಮಾರ್ ಮತ್ತು ಅವರ ತಂದೆಯ ಮೇಲೆ ನಗರ ಠಾಣೆ ಸಿಪಿಐ ದಿನೇಶ್ ಕುಮಾರ್ ಸೋಮವಾರ ಹಲ್ಲೆ ನಡೆಸಿ ಮನಸೋ ಇಚ್ಛೆ ಹೊಡೆದು ನಿಂದಿಸಿದ್ದಾರೆ ಎಂದು ಅರೋಪಿಸಿ ದೂರು ನೀಡಲಾಗಿತ್ತು.
ಖಂಡನೆ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಕೆಂಪರಾಜು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಕೀಲ ರವಿಕುಮಾರ್ ಮೇಲಿನ ಹಲ್ಲೆಯನ್ನು ಖಂಡಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಕುಣಿಗಲ್,ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿಯೂ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರವುಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಖಜಾಂಚಿ ಭಾರತಿ, ಹಿರಿಯ ವಕೀಲರಾದ ಎನ್.ಸಿ.ಚಂದ್ರಯ್ಯ, ಕೆ.ಎಸ್.ಜಗನ್ನಾಥ್, ಬಸವರಾಜು, ಪ್ರಭಾಕರ್, ರು, ರಂಗರಾಜು, ಟಿ.ಎನ್.ಗುರುರಾಜ್, ಹರಿಕುಮಾರ್, ಸಿದ್ದರಾಜು, ನಟರಾಜು, ಪ್ರಕಾಶ್, ರವಿ, ನರಸಿಂಹರಾಜು, ರವೀಂದ್ರನಾಥಠಾಗೂರ್, ಗಣೇಶ್ ಪ್ರಸಾದ್, ಚೇತನ್, ಶಿವರಾಂ ಮತ್ತಿತರರು ಭಾಗವಹಿಸಿದ್ದರು.
ಕೆಂಪುಪಟ್ಟಿ ಧರಿಸಿ ಪ್ರತಿಭಟನೆ
ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿ ದಿನೇಶ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಅಮಾನತುಗೊಳಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ. ಕ್ರಮಕೈಗೊಳ್ಳಲು 5 ದಿನ ಕಾಲಾವಕಾಶ ನೀಡಲಾಗಿದ್ದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಸೂಚನೆಯಂತೆ ನಾಳೆಯಿಂದ ವಕೀಲರು ತೋಳಿಗೆ ಕೆಂಪುಪಟ್ಟಿ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುತ್ತೇವೆ. ಐದು ದಿನದ ನಂತರವು ನ್ಯಾಯ ಸಿಗದಿದ್ದರೆ ಹೋರಾಟದ ಸ್ವರೂಪ ಬದಲಾಯಿಸುತ್ತೇವೆ.
ಆರ್.ತಿಪ್ಪೇಸ್ವಾಮಿ
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಕೀಲರ ಸಂಘ
ಎ್ಐಆರ್ ದಾಖಲು
ತುಮಕೂರು&ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ಸಂಬಂಧಿಸಿದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ರೈಲ್ವೆ ಇಲಾಖೆ ಸೆಕ್ಷನ್ ಇಂಜಿನಿಯರ್ ಕುಶಾಲ್ ಅಧಿಕಾರಿಗಳು ಜಮೀನಿನ ಮಾಲೀಕರಾದ ರವಿಕುಮಾರ್, ಚಂದ್ರಶೇಖರ್ ವಿರುದ್ಧ ನ.4 ರಂದು ನಗರ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.