ಗಂಗೊಳ್ಳಿಯಲ್ಲಿ ಹುಲಿವೇಷಧಾರಿಗಳ ಮೇಲೆ ಹಲ್ಲೆ

man thrashed
Published on

ಗಂಗೊಳ್ಳಿ: ಹುಲಿವೇಷ ತಂಡದಲ್ಲಿದ್ದ ಹುಲಿವೇಷಧಾರಿ, ಗಂಗೊಳ್ಳಿ ಗ್ರಾಮದ ಬಾವಿಕಟ್ಟೆ ನಿವಾಸಿ ಸುದರ್ಶನ ಎಂಬುವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಟನೆ ತ್ರಾಸಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ವಿನಾಯಕ ಬಸ್ ಬಾಡಿ ಬಿಲ್ಡರ್ ಕಂಪನಿಗೆ ಹುಲಿವೇಷ ಕುಣಿಯಲೆಂದು ತಮ್ಮ ತಂಡದೊಂದಿಗೆ ಹೋದಾಗ ಅಲ್ಲಿದ್ದ ಇಬ್ಬರು ಸುದರ್ಶನ ಅವರನ್ನು ತಡೆದು ಹೊರಗೆ ಹೋಗುವಂತೆ ತಳ್ಳಿದ್ದಾರೆ. ಬಳಿಕ ಅಲ್ಲಿ ಕೆಲಸ ಮಾಡುತ್ತಿದ್ದ ಎಂಟತ್ತು ಮಂದಿ ಸ್ಟೀಲ್ ರಾಡ್‌ನಿಂದ ಗಂಭೀರವಾಗಿ ಹಲ್ಲೆ ವಾಡಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿದ್ದಾರೆ. ಸುದರ್ಶನ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net