ಬಂಟ್ವಾಳ: ತಾಲೂಕಿನ ಪಂಜಿಕಲ್ಲಿನಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಮನೆಗೆ ಬುಧವಾರ ದಾಳಿ ನಡೆಸಿದ ಬಂಟ್ವಾಳ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಆರೋಪಿ ಸಹಿತ ಕಳ್ಳಬಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಂಜಿಕಲ್ಲು ಗ್ರಾಮದ ಕಂಬಲ್ದಡ್ಕ ನಿವಾಸಿ ರುಕ್ಮಯ ಪೂಜಾರಿ ಎಂಬವರ ಮನೆಗೆ ದಾಳಿ ನಡೆಸಿ 1.5 ಲೀಟರ್ ಸಾರಾಯಿ ಹಾಗೂ 55 ಲೀ.ಬೆಲ್ಲದ ಕೊಳೆ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕ ರಾಜನಾಯ್ಕ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.