ಸಾಕ್ಷಿ ಹೇಳದಂತೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಪುಂಡರು

Crime Logo
Published on


ಕಲಬುರಗಿ ನಗರದ ಕೋರ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಕೊಲೆ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ  ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ರಮೇಶ ದುರ್ಗಪ್ಪ ಎಂಬುವರಿಗೆ ಬೆದರಿಕೆ ಹಾಕಲಾಗಿದೆ. ಕೋರ್ಟ್ನಲ್ಲಿ ಸ್ಟೇನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ.
ರಮೇಶ ಅವರ ಸಹೋದರಿ ನೇತ್ರಾವತಿ ಎಂಬುವರನ್ನು ಮುದಗಲ್‌ನ ಚಂದ್ರಣ್ಣ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.  ಆಸ್ತಿ ವಿಚಾರವಾಗಿ ಗಂಡನ ಮನೆಯ ಸಂಬAಧಿ ಶಿವರಾಜ ಎಂಬುವರು ಸಹೋದರಿಯ ಕೊಲೆ ಮಾಡಿದ್ದರು. ಈಗ ಆತ ರಾಯಚೂರು ಜೈಲಿನಲ್ಲಿದ್ದು, ಆತನ ವಿರುದ್ಧ ಸಾಕ್ಷಿ ಹೇಳದಂತೆ ನಿಂಗಪ್ಪ, ಈರಪ್ಪ, ಲಕ್ಷಿö್ಮÃ ಹಾಗೂ ಗುಬ್ಬಮ್ಮ ಎಂಬುವರು ವಾಹನದಲ್ಲಿ ಬಂದು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಸಾಕ್ಷಿ ಹೇಳಿದರೆ ಪ್ರಾಣ ತೆಗೆಯುವುದಾಗಿ ಅಂಜಿಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net