ಕಲಬುರಗಿಯಲ್ಲಿ ಎಟಿಎಂ ಯಂತ್ರ ಕೊರೆದು ೧೮ ಲಕ್ಷ ರೂ.ದರೋಡೆ

KLB ATM
ಕಲಬುರಗಿಯ ರಿಂಗ್ ರೋಡ್‌ನಲ್ಲಿರುವ ಎಸ್‌ಬಿಐ ಬ್ಯಾಂಕಿನ ಎಟಿಎಂ ಕಟ್ ಮಾಡಿ ಹಣ ದರೋಡೆ ಮಾಡಿರುವುದು.
Published on

ಬೀದರ್ ಘಟನೆ ಮಾಸುವ ಮುನ್ನವೇ ಕಲಬುರಗಿಯಲ್ಲಿ ಲೂಟಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಗರದ ರಿಂಗ್ ರಸ್ತೆಯ ರಾಮ ನಗರದ ಪೂಜಾರಿ ಚೌಕ್ ಬಳಿಯಲ್ಲಿರುವ ಎಸ್‌ಬಿಐ ಬ್ಯಾಂಕಿನ ಎಟಿಎಂ ಒಡೆದು ೧೮ ಲಕ್ಷ ರೂ. ದರೋಡೆ ಮಾಡಿದ ಘಟನೆ ಬುಧವಾರ ನಡೆದಿದೆ. ಬೀದರ್‌ದಲ್ಲಿ ಎಟಿಂಎಗೆ ಹಣ ತುಂಬಿಸುವ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಎಂಟಿಎA ಲೂಟಿ ನಡದಿದೆ.

ಬುಧವಾರ ನಸುಕಿನ ಜಾವ ಕಾರಿನಲ್ಲಿ ಬಂದ ನಾಲ್ವರು ದಡೋಡೆಕೋರರ ತಂಡ ಅಲ್ಲಿದ್ದ ಸಿಸಿ ಕ್ಯಾಮರಾಗಳಿಗೆ ಬ್ಲಾಕ್ ಸ್ಪೆçà ಮಾಡಿ, ದೃಶ್ಯಗಳು ಸೆರೆಯಾಗದಂತೆ ಚಾಣಾಕ್ಷತೆ ಮಾಡಿ ನಂತರ ಗ್ಯಾಸ್ ಕಟರ್ ಬಳಸಿಕೊಂಡು ಎಟಿಎಂ ಯಂತ್ರದಲ್ಲಿ ಹಣ ಇರುವ ಜಾಗವನ್ನು ಕೊರೆದು ಅಲ್ಲಿದ್ದ ಹಣವನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ.

ಮಂಗಳವಾರ ಸಂಜೆಯಷ್ಟೆ ಬ್ಯಾಂಕ್ ಸಿಬ್ಬಂದಿ ೧೮ ಲಕ್ಷ ರೂ.ಗಳನ್ನು ಎಟಿಎಂ ಯಂತ್ರದಲ್ಲಿ ಭರಿಸಿದ್ದರು. ಇದು ಗೊತ್ತಿದ್ದವರು ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಬೀದರ್‌ನಲ್ಲಿ ನಡೆದ ಘಟನೆಗೂ ಕಲಬುರಗಿ ಘಟನೆಗೂ ಸಾಮ್ಯತೆ ಕಂಡು ಬಂದಿರುವುದರಿAದ ಒಂದಕ್ಕೊAದು ಲಿಂಕ್ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನಸುಕಿನ ಜಾವ ದರೋಡೆಕೋರರು ಎಟಿಎಂ ಲೂಟಿ ಮಾಡಲು ಕೊರೆದ ಬೆನ್ನಲ್ಲಿಯೇ ಮುಂಬಯಿನಲ್ಲಿರುವ ಕೇಂದ್ರ ಕಚೇರಿಗೆ ಸಂದೇಶ ರವಾನೆಯಾಗಿ ಸೈರನ್ ಬಾರಿಸಿದೆ. ಅದರ ಬೆನ್ನಲ್ಲಿಯೇ ಕಲಬುರಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಸುಕಿನ ಜಾವ ೩ ಗಂಟೆ ಸುಮಾರಿಗೆ ಒಳಗಡೆ ಬಂದು ಅರ್ಧ ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಪರಾರಿಯಾಗಿದ್ದಾರೆ.

ಮಾಹಿತಿ ಅರಿಯುತ್ತಲೇ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ, ಉಪ ಆಯುಕ್ತರಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿ ರಾಜಣ್ಣ, ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಇತರರು ದೌಡಾಯಿಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

=====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net