ಅರೆಭಾಷೆ ಅಕಾಡೆಮಿ ವತಿಯಿಂದ ಆಟಿ ಪೊರ್ಲು

Tulunada Flag
Published on

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಟಿ ಪೊರ್ಲು ಕಾರ್ಯಕ್ರಮ ಲಯನ್ಸ್ ಸೇವಾ ಸದನದಲ್ಲಿ ಬುಧವಾರ ನಡೆಯಿತು.

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕಿಶೋರ್ ಕುಮಾರ್ ಕಿರ್ಲಾಯ ಆಟಿ ಆಚರಣೆಗಳ ಕುರಿತು ಉಪನ್ಯಾಸ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕೋಶಾಧಿಕಾರಿ ರಮೇಶ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಲೋಕೇಶ್ ಊರುಬೈಲು, ಜಯರಾಮ ದೇರಪ್ಪಜ್ಜನಮನೆ, ಲತಾ ಕುದ್ಪಾಜೆ ಉಪಸ್ಥಿತರಿದ್ದರು. ಲಯನ್ಸ್ ಅಧ್ಯಕ್ಷ ರಾಮಕೃಷ್ಣ ರೈ ಸ್ವಾಗತಿಸಿದರು. ಲತಾ ಕುಪ್ಪಾಜೆ ವಂದಿಸಿದರು. ರೂಪಕಲಾ ರೈ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

ವೈವಿಧ್ಯಮಯ ಖಾದ್ಯಗಳೊಂದಿಗೆ ಆಟಿ ಭೋಜನ ನಡೆಯಿತು. ಚೆನ್ನೆಮಣೆ ಸ್ಪರ್ಧೆ, ಸೋಬಾನೆ ಸ್ಪರ್ಧೆ, ಸ್ಥಳದಲ್ಲೇ ಅರೆಭಾಷೆ ಕವನ ರಚನೆ ಸ್ಪರ್ಧೆ, ದಂಪತಿ ಸ್ಪರ್ಧೆ, ಆಟಿ ಕಳಂಜ, ತೆಂಗಿನಕಾಯಿ ಕುಟ್ಟುವುದು, ನೃತ್ಯ ಹಾಗೂ ಅರೆಭಾಷೆ ಸೋಬಾನೆ ಹಾಡು ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net