

ಮಂಜೇಶ್ವರ: ಸಂವಿಧಾನ ಬಗ್ಗೆ ಮಾತನಾಡಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳಿಗೆ ಅರ್ಹತೆ ಇಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದಬ್ಬಾಳಿಕೆ ನಡೆಸಿ ಸಂವಿಧಾನದ ಕೊಲೆ ಮಾಡಿದ ಇಂದಿರಾ ಗಾಂಧಿ ಕುಟುಂಬಕ್ಕೆ, ದೇಶದ ಸ್ವಾತಂತ್ರೃ ಒಪ್ಪದೇ ದೇಶ ವಿರೋಧಿ ಆಗಿದ್ದ ಕಮ್ಯುನಿಸ್ಟ್ ಪಕ್ಷಗಳು ಇಂದು ಸಂವಿಧಾನ ಸಂರಕ್ಷಣೆ ಅಂತ ಬಡಿದುಕೊಳ್ಳುವುದು ಸ್ವಯಂರಕ್ಷಣೆಯ ನಾಟಕ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಹೇಳಿದರು.
ಪೈವಳಿಕೆ ಪಂಚಾಯಿತಿಮಟ್ಟದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಕಾರ್ಯಕ್ರಮ ಬುಧವಾರ ಕಾಯರ್‌ಕಟ್ಟೆ ಬಿಜೆಪಿ ಕಚೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಎ.ಕೆ.ಕಯ್ಯರ್, ಪ್ರಸಾದ್ ರೈ, ಕೆ.ವಿ.ಭಟ್, ಯತಿರಾಜ್ ಶೆಟ್ಟಿ, ಪ್ರಶಾಂತ್ ಜೋಡುಕಲ್ಲು, ಸುಬ್ರಹ್ಮಣ್ಯ ಭಟ್, ವಿಘ್ನೇಶ್ವರ ಮಾಸ್ತರ್, ಪುಷ್ಪ ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಲೋಕೇಶ್ ನೋಂಡ ಸ್ವಾಗತಿಸಿದರು. ಸದಾಶಿವ ಚೇರಾಲ್ ವಂದಿಸಿದರು. ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಬರಮಾಡಿಕೊಳ್ಳಲಾಯಿತು.