ಜಾತ್ರೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ಸನ್ಮಾನ

At the fair, Minister M.B. Kudos to Patil
ವಿಜಯಪುರದ ಬುರಣಾಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲರನ್ನು ಸನ್ಮಾನಿಸಲಾಯಿತು. ಬಿ. ಎಸ್. ಬಿರಾದಾರ, ಎಂ.ಆರ್. ಪಾಟೀಲ ಬಳ್ಳೊಳ್ಳಿ ಮತ್ತಿತರರಿದ್ದರು.
Published on

ವಿಜಯಪುರ: ಬಬಲೇಶ್ವರ ತಾಲೂಕಿನ ಸಾರವಾಡ ದ್ಯಾಮವ್ವದೇವಿ ಮತ್ತು ವಿಜಯಪುರ ನಗರದ ಬುರಾಣಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಿ ಜಾತ್ರೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲ ಭಾಗವಹಿಸಿ ಆಶೀರ್ವಾದ ಪಡೆದರು.

ಸೋಮವಾರ ಎರಡೂ ಗ್ರಾಮ ದೇವತೆಗಳ ಜಾತ್ರೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಜಾತ್ರಾ ಕಮೀಟಿಯವರಿಂದ ವಿಶೇಷ ಸನ್ಮಾನ ಸ್ವೀಕರಿಸಿ, ದೇಶದ ಐದಾರು ರಾಜ್ಯಗಳು ಭೀಕರ ಬರ ಆವರಿಸಿದ್ದು, ದೇವರು ಬರ ನಿವಾರಿಸಿ ಸುಖ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸಿದರು.

ಸಾರವಾಡ ಗ್ರಾಮದ ಹಿರಿಯರಾದ ಕಲ್ಲಯ್ಯ ಲೋಕಯ್ಯ ಹಿರೇಮಠ, ಸದಾಶಿವ ಚಿಕರಡ್ಡಿ, ಮಲ್ಲಣ್ಣ ಕೋಟಿ, ದುಂಡಪ್ಪ ಕೋಟಿ, ಶಿವಪ್ಪ ಕೋಟಿ, ಚಂದ್ರಕಾಂತ ವಾಲಿ, ಶಿವಪ್ಪ ಬಡಿಗೇರ, ದುಂಡಪ್ಪ ಕೋಟಿ, ಪ್ರಭು ಕೋಟಿ, ಸಿದ್ರಾಮಪ್ಪ ಬಿದರಿ, ರಾಜಶೇಖರ ಇನಾಮದಾರ, ರುದ್ರಗೌಡ ಬಿರಾದಾರ ಹಾಗೂ ಭಾಗಮ್ಮ ದೇವಿ ಜಾತ್ರೆ ಕಾರ್ಯಕ್ರಮದಲ್ಲಿ ಜಗದ್ಗುರು ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಸೇರಿದಂತೆ ಮುಖಂಡರಾದ ಬಿ.ಎಸ್. ಬಿರಾದಾರ, ಸಿದರಾಯ ಆಡಿನ, ಎಸ್.ಸಿ. ಚಿಕರಡ್ಡಿ, ಎಂ.ಆರ್. ಪಾಟೀಲ ಬಳ್ಳೊಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net