ರಾಮನಗರದಲ್ಲಿ 17ಕ್ಕೆ ಮೊಗಳ್ಳಿ ಗಣೇಶ್ ನುಡಿ ನಮನ

e30b33d9-580e-4e85-b0a1-8e407d02fc9a
Published on

ರಾಮನಗರ: ‘ನಮ್ಮವರು’ ತಂಡವು ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರ ನುಡಿ ನಮನ ಕಾರ್ಯಕ್ರಮವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿದೆ.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ. ಸಾಹಿತಿ ಹಾಗೂ ವಿಮರ್ಶಕ ಡಾ. ನಟರಾಜ ಹುಳಿಯಾರ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಎನ್.ಕೆ. ಲೋಲಾಕ್ಷಿ ಅವರು ಮೊಗಳ್ಳಿ ಅವರ ಸಾಹಿತ್ಯ ಮತ್ತು ಬದುಕಿನ ವಿವಿಧ ಮಗ್ಗುಲುಗಳ ಕುರಿತು ಮಾತನಾಡಲಿದ್ದಾರೆ.

ಶೋಭಾ ಮೊಗಳ್ಳಿ ಗಣೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ದಲಿತಪರ, ರೈತಪರ, ಕನ್ನಡಪರ, ಮಹಿಳಾಪರ, ಜನಪರ ಸಂಘಟನೆಗಳು ಹಾಗೂ ಸಂಘ–ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ಅಂದು ಮೊಗಳ್ಳಿ ಅವರು ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇರಲಿದೆ ಎಂದು ನಮ್ಮವರು ತಂಡದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net