ಮಹಿಳೆಯ ಶ್ವಾಸಕೋಶದಲ್ಲಿ ಬಟ್ಟೆ ಪಿನ್: ಸಿಎಂಐ ಆಸ್ಪತ್ರೆ ವೈದ್ಯರಿಂದ  ಯಶಸ್ವಿ ಚಿಕಿತ್ಸೆ

Aster CMI hospital
Published on

ಬೆಂಗಳೂರು: ಮಹಿಳೆಯ (55)ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಚೂಪಾದ ಲೋಹದ ಬಟ್ಟೆ ಪಿನ್ ಅತ್ಯಂತ ಸೂಕ್ಷ್ಮವಾದ ಶಸಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಪ್ರಕರಣದಲ್ಲಿ ಪೋಗಾರ್ಟಿ ಬಲೂನ್ ಕ್ಯಾಥೆಟರ್ ಬಳಸಿ ಬ್ರಾಂಕೋಸ್ಕೋಪಿಕ್ ತಂತ್ರದ ಮೂಲಕ ಶಸಚಿಕಿತ್ಸೆ ನಡೆಸುವ ಮೂಲಕ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮೊನಾಲಜಿ ವಿಭಾಗದ ವೈದ್ಯರು ಮಹಿಳೆಗೆ ಮರು ಜೀವ ನೀಡಿದ್ದಾರೆ.

ಶಾಪಿಂಗ್ ವೇಳೆ ಬಟ್ಟೆಗಳನ್ನು ನೋಡುವಾಗ ಪಿನ್ ಬಾಯಲ್ಲಿಟ್ಟುಕೊಂಡಿದ್ದ ಮಹಿಳೆ ಆಕಸ್ಮಿಕವಾಗಿ ಅದನ್ನು ನುಂಗಿದ್ದಾರೆ. ಅದು ಅವರ ಶ್ವಾಸಕೋಶನಾಳದ ಬಾಲಭಾಗಕ್ಕೆ ಜಾರಿ ಅಲ್ಲಿ ಸಿಲುಕಿಕೊಂಡಿದೆ. ನಂತರದಲ್ಲಿ ಮಹಿಳೆಗೆ ನಿರಂತರ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ. ಒಮ್ಮೆ ಆಸ್ಟರ್ ಸಿಎಂಐ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಿಟಿ ಸ್ಕಾೃನ್ ಮತ್ತು ಎದೆಯ ಎಕ್ಸ್ -ರೇ ಮಾಡಿದಾಗ ಬ್ರಾಂಕಿಯಲ್ ನಲ್ಲಿ ಲೋಹದ ಪಿನ್ ಇರುವುದು ಪತ್ತೆಯಾಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮೆನಾಲಜಿ ವಿಭಾಗದ ಡಾ. ಕೆ. ಸುನೀಲ್ ಕುಮಾರ್, ಮಹಿಳೆ ನುಗಿದ್ದ ಪಿನ್ನು ಚೂಪಾದ ತುದಿ ಶ್ವಾಸನಾಳದ ಗೋಡೆಗೆ ಚುಚ್ಚಿಕೊಂಡಿತ್ತು. ಮತ್ತಷ್ಟು ಗಾಯದ ಅಪಾಯದಿಂದಾಗಿ ಸಾಮಾನ್ಯವಾಗಿ ಅದನ್ನು ಹೊರತೆಗೆಯುವ ವಿಧಾನ ವಿಲವಾಯಿತು. ಪರಿಸ್ಥಿತಿಯ ಸಂಕಿರ್ಣತೆಯನ್ನು ಅರಿತು ಪೋಗಾರ್ಟಿ ಬಲೂನ್ ಬಳಸಿ ಮೃದುವಾಗಿ ವಸ್ತುವನ್ನು ಸಿಡಿಸಲು ಸಾಧ್ಯವಾಯಿತು ಮತ್ತು ನಂತರ ಸೆಡೇಷನ್ ಅಡಿಯಲ್ಲಿ ಬ್ರಾಂಕೋಸ್ಕೋಪಿ ಸಮಯದಲ್ಲಿ ರ್ಯಾಟ್ ಟೂತ್ ಪೋರ್ಸೆಪ್ಸ್ ಬಳಸಿ ಅದನ್ನು ಹೊರತೆಗೆಯಲಾಯಿತು ಎಂದು ವಿವರಿಸಿದ್ದಾರೆ.

ಚಿಕಿತ್ಸೆಗೆ ರೋಗಿಯು ಉತ್ತಮ ರೀತಿಯಲ್ಲಿ ಸ್ಪಂಧಿಸಿದ್ದು, ಶ್ವಾಸಕೋಶದ ಸಂಪೂರ್ಣ ಚೇತರಿಕೆ ನಂತರ ಅವರನ್ನು ಮನೆಗೆ ಕಳುಹಿಸಲಾಯಿತು. ಇದು ಆಕಸ್ಮಿಕವಾಗಿ ಸಂಭವಿಸಿದ್ದರೂ, ಸಮಸ್ಯೆ ಗಂಭೀರವಾಗಿತ್ತು. ಹಾಗಾಗಿ ಬಾಯಿಯಲ್ಲಿ ಯಾವುದೇ ವಸ್ತು ಇಟ್ಟುಕೊಳ್ಳುವ ಮುನ್ನ ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಆಸ್ಪತ್ರೆಯ ಮುಖ್ಯ ಕಾರ್ಯಚರಣೆ ಅಧಿಕಾರಿ ಎಸ್ಜಿಎಸ್ ಲಕ್ಷ್ಣಣನ್ ಮಾತನಾಡಿ, ಈ ಪ್ರಕರಣದಲ್ಲಿ ವೈದ್ಯಕೀಯ ಪರಿಣತಿ, ಅತ್ಯಾಧುನಿಕ ತಂತ್ರಜ್‌ಞಆನ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವಿಕೆಯಿಂದ ನಿರ್ಣಾಯಕ ಯಶಸ್ಸು ಕಾಣಲು ಸಾಧ್ಯವಾಯಿತು. ಇದು ಆಸ್ಪತ್ರೆಯ ಸೌಲಭ್ಯ, ಸವಲತ್ತು, ಆಧುನಿಕ ಪರಿಕರಗಳ ಅಳವಿಕೆ, ನುರಿತ ವೈದ್ಯರು ಹಾಗೂ ಸಿಬ್ಬಂದಿ ಸಾಮರ್ಥ್ಯವನ್ನು ಪ್ರತಿಬಿಂಬಿಸಿದೆ. ಆ ಮೂಲಕ ರೋಗಿಯ ಸುರಕ್ಷತೆ ಮತ್ತು ಕಾಳಜಿಯನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net