ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘ ಅಭಿವೃದ್ಧಿ

Oplus_131072
Oplus_131072
Published on

ಹಲಗೂರು: ಗುಣಮಟ್ಟದ ಹಾಲು ಪೂರೈಸುವುದರಿಂದ ಸಂಘ ಅಭಿವೃದ್ಧಿಯಾಗುವುದರ ಜತೆಗೆ ಉತ್ತಮ ಲಾಭ ಗಳಿಕೆಯಿಂದ ನಿಮಗೆ ಸಹಕಾರಿಯಾಗಲಿದೆ ಎಂದು ಸಹಕಾರ ಸಂಘದ ಆಡಳಿತಾಧಿಕಾರಿ ಜಿ.ಎಂ.ರಾಮಕೃಷ್ಣ ತಿಳಿಸಿದರು.


ಗೊಲ್ಲರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಹಾಲು ಸರಬರಾಜು ಮಾಡದಿದ್ದರೆ ಸಂಘಕ್ಕೂ ನಷ್ಟ, ನಿಮಗೂ ಲಾಭ ಬರುವುದಿಲ್ಲ. ಆದರಿಂದ ನಿಮ್ಮ ರಾಸುಗಳಿಗೆ ಹಸಿ, ಒಣಹುಲ್ಲು ನೀಡುವುದರಿಂದ ಗುಣಮಟ್ಟದ ಹಾಲು ಬರುತ್ತದೆ. ಕಳೆದ ಸಾಲಿನಲ್ಲಿ ಹೆಚ್ಚು ಲಾಭ ಬಂದಿದೆ. ಇನ್ನು ಮುಂದೆಯೂ ಉತ್ತಮ ಲಾಭ ಬರಲು ನಿಮ್ಮ ಸಹಕಾರ ಅಗತ್ಯವಿದೆ ಎಂದರು.


ಕಾರ್ಯದರ್ಶಿ ಶಿವಲಿಂಗೇಗೌಡ ವಾರ್ಷಿಕ ವರದಿ ಮಂಡಿಸಿ, ಸಂಘಕ್ಕೆ 2023-24ನೇ ಸಾಲಿನಲ್ಲಿ 17,76,283 ರೂ. ನಿವ್ವಳ ಲಾಭ ಲಭಿಸಿದೆ. ಆ ಲಾಭದ ಹಣದಲ್ಲಿ ಸಂಘದ ಸದಸ್ಯರಿಗೆ ಬೋನಸ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.


ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಐವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾಸಬಾಯಿ, ಸಂಘದ ಮಾಜಿ ಅಧ್ಯಕ್ಷ ಕೆ.ಮಹದೇವ, ಹಿರಿಯ ಮುಖಂಡ ಪುಟ್ಟಸ್ವಾಮಿ, ಕಾರ್ಯದರ್ಶಿ ಶಿವಲಿಂಗೇಗೌಡ, ಹಾಲು ಪರೀಕ್ಷಕ ಉಮೇಶ, ಸಹಾಯಕ ಕಿರಣ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net