ಬೈಪಾಡಿ ದೇವಳ ಸಭಾಭವನಕ್ಕೆ ನೆರವು : ಧರ್ಮಸ್ಥಳದ 2 ಲ.ರೂ. ಚೆಕ್ ಹಸ್ತಾಂತರ

New Project (12)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬಂದಾರು ಗ್ರಾಮ ಪೆರ್ಲ ಬೈಪಾಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನಾ ಅಷ್ಟ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದವರಿಗೆ ಅಭಿನಂದನಾ ಸಭೆ ಸಿದ್ಧಿಶ್ರೀ ಕಲಾವೇದಿಕೆಯಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಿದ್ಧಿಶ್ರೀ ಸಭಾಭವನಕ್ಕೆ ಶ್ರೀ ಕ್ಷೇತ್ರದಿಂದ 2ಲಕ್ಷ ರೂ.ಸಹಾಯಧನ ಚೆಕ್ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಬ್ರಹ್ಮಕಲಶೋತ್ಸವ ಸಮಿತಿಗೆ ಹಸ್ತಾಂತರಿಸಿದರು.

ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಬೈಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರಮೀಳಾ, ಒಕ್ಕೂಟದ ಪದಾಧಿಕಾರಿಗಳಾದ ದಿನೇಶ್ ಅಡ್ಡಾರು, ಅನಿತಾ ಕುರುಡಂಗೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಬಜಗುತ್ತು, ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ ಗೌಡ ಅಡ್ಡಾರು, ಆನುವಂಶಿಕ ಆಡಳಿತ ಮೊಕ್ತೇಸರ ಕುಕ್ಕಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ದೇವಳದ ಅರ್ಚಕ ಅನಂತರಾಮ ಶಬರಾಯ, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಫಲಸದಕೋಡಿ, ಮಹಿಳಾ ಸಮಿತಿ ಅಧ್ಯಕ್ಷರಾದ ಶ್ವೇತಾ ಹಾರ್ತ್ಯಾರು ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net