

ಕಾರವಾರ: ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ಲೈವ್ ನಡೆಯಲಿದ್ದು, ಸಿಸಿ ಕ್ಯಾಮರಾ ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ 719 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ವೆಬ್ ಕಾಸ್ಟಿಕ್ ಇಲ್ಲದ ಮತಗಟ್ಟೆಗಳಲ್ಲಿ .
287 ಮೈಕ್ರೋ ಆಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.
ಮತದಾನದ ಲೈವ್ನಿ ಯಂತ್ರಣ ಕೊಠಡಿ ಕಾರವಾರ ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಚುನಾವಣಾಧಿಕಾರಿ ಕಚೇರಿಯಲ್ಲೂ ಇರಲಿದೆ.
ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಮಾಹಿತಿ ನೀಡಲು ರನ್ನರ್‌ಗಳನ್ನು ನಿಯೋಜಿಸಲಾಗಿದೆ. ಅವರು ಪ್ರತಿ 2 ತಾಸಿಗೊಮ್ಮೆ ಮೊಬೈಲ್ ನೆಟ್ವರ್ಕ್ ಬರುವ ಪ್ರದೇಶಕ್ಕೆ ಬಂದು ಮತದಾನದ ಪ್ರಮಾಣ ಎಷ್ಟಾಗಿದೆ ಎಂಬ ಮಾಹಿತಿ ನೀಡಬೇಕಿದೆ.
ಇನ್ನು ಪೊಲೀಸ್ ವಾಕಿಗಳನ್ನೂ ಈ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.
ವಿನಾಯಿತಿ:
ಪ್ರತಿ ಮತಗಟ್ಟೆಯಲ್ಲಿ ಶೌಚಗೃಹ ಮುಂತಾದ ಅತಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಮಂಗಳವಾರ ರಾತ್ರಿ ಊಟ, ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೂ ಒಂದು ಚಹಾ ವ್ಯವಸ್ಥೆಯನ್ನು ಅಕ್ಷರ ದಾಸೋಹ ಅಡುಗೆಯವರಿಂದ ಮಾಡಿಸಲಾಗುತ್ತಿದೆ.
ಪ್ರತಿ ಕೇಂದ್ರಕ್ಕೆ ಒಂದು ಶುದ್ಧೀಕರಿಸಿದ ನೀರಿನ ಕ್ಯಾನ್ ಒದಗಿಸಲಾಗಿದೆ. ಮಹಿಳೆಯರನ್ನು ಆಯಾ ಕ್ಷೇತ್ರದಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರು ಬುಧವಾರ ಬೆಳಗ್ಗೆ 5 ಗಂಟೆಯ ಒಳಗೆ ಮತಗಟ್ಟೆ ತಲುಪುವಂತಿದ್ದರೆ ಸಂಬಂಧಪಟ್ಟ ಪಿಆರ್‌ಒ ಅನುಮತಿ ಪಡೆದು ಮಂಗಳವಾರ ರಾತ್ರಿ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ದುಂಬಾಲು:ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ವಿನಾಯಿತಿ ನೀಡುವಂತೆ ಚುನಾವಣಾಧಿಕಾರಿಗಳಿಗೆ ದುಂಬಾಲು ಬೀಳುತ್ತಿರುವುದು ಮಂಗಳವಾರ ಕಂಡುಬಂತು. ಒಬ್ಬ ತನ್ನ ತಂದೆ ಸಾವಿನ ಹಾದಿಯಲ್ಲಿದ್ದಾರೆ. ವಿನಾಯಿತಿ ನೀಡಿ ಎಂದು ಕೇಳಿದರೆ, ಇನ್ನೊಬ್ಬ ಮಹಿಳೆ ತಮ್ಮ ಕಾಲು ಮುರಿದಿದ್ದು, ವಿನಾಯಿತಿ ನೀಡುವಂತೆ ವಿನಂತಿಸಿದರು. ಮತ್ತೊಬ್ಬರು ಅಧಿಕಾರಿಯೊಬ್ಬರ ಜತೆ ಜಗಳಕ್ಕೇ ಇಳಿದಿದ್ದು, ಕಂಡುಬಂತು.
75 ಮಾರ್ಗಗಳು ರದ್ದು:
ವಿಧಾನಸಭಾ ಚುನಾವಣೆಗಾಗಿ ಎನ್‌ಡಬ್ಲುಕೆಆರ್‌ಟಿಸಿ ಶಿರಸಿ ವಿಭಾಗದ ಸುಮಾರು 140 ಬಸ್‌ಗಳನ್ನು ಪಡೆಯಲಾಗಿದೆ. ಮೇ.10 ರಂದು ಸುಮಾರು 75 ಮಾರ್ಗದಲ್ಲಿ ಬಸ್‌ಗಳ ಓಡಾಟ ರದ್ದಾಗಲಿದೆ. ಪರ್ಯಾಯ ಬಸ್ ವ್ಯವಸ್ಥೆ ಇರುವ ಸ್ಥಳೀಯ ಗ್ರಾಮೀಣ ಹಾಗೂ ದೂರಗಾಮಿ ಬಸ್‌ಗಳನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಎನ್‌ಡಬ್ಲುಕೆಆರ್‌ಟಿಸಿ ಅಽಕಾರಿಗಳು ತಿಳಿಸಿದ್ದಾರೆ.ಮೇ 10 ರಂದು ಸಾಕಷ್ಟು ಮದುವೆ, ಮುಂಜಿ ಮುಂತಾದ ಸಮಾರಂಭಗಳೂ ಇವೆ. ಖಾಸಗಿ ವಾಹನಗಳನ್ನೂ ಚುನಾವಣೆ ಕರ್ತವ್ಯಕ್ಕೆ ಪಡೆಯಲಾಗಿದೆ. ಇದರಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ರಾಜಸ್ತಾನದ ಪೊಲೀಸರು, ಮಹಾರಾಷ್ಟçದ ಹೋಂ ಗಾರ್ಡ್
ಮತದಾನಕ್ಕಾಗಿ ವಿಶೇಷ ಭದ್ರತೆ ಒದಗಿಸಲಾಗಿದೆ. ಒಟ್ಟು 287 ಮತಗಟ್ಟೆಗಳು ಸೂಕ್ಷ÷್ಮ ಎಂದು ಗುರುತಿಸಲಾಗಿದ್ದು, ಅಲ್ಲಿ ಒಬ್ಬ ಬಂದೂಕುಧಾರಿ ಸಿಬ್ಬಂದಿಯನ್ನು ಒದಗಿಸಲಾಗಿದೆ. ಒಟ್ಟಾರೆ 1352 ಪೊಲೀಸ್ ಅಽಕಾರಿ, ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ, ಕೆಎಸ್‌ಆರ್‌ಪಿ 6 ತುಕಡಿಗಳು, ರಾಜಸ್ತಾನ ಸಶಸ್ತ್ರ ಮೀಸಲು ಪಡೆಯ 7 ತುಕಡಿ, ಸಿಆರ್‌ಪಿಎಫ್‌ನ 4 ತುಕಡಿ, ಸಿಎಪಿಎಫ್‌ನ 7 ತುಕಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮಾತ್ರವಲ್ಲ ಮಹಾರಾಷ್ಟç ಸೊಲ್ಲಾಪುರದ 200 ಸೇರಿ ಒಟ್ಟು 850 ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ ತಿಳಿಸಿದರು.
ಒಟ್ಟು ಮತದಾರರು
ಕ್ಷೇತ್ರ ಪುರುಷ ಮಹಿಳೆ ಒಟ್ಟು