ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ

Published on

ಪುತ್ತೂರು ಗ್ರಾಮಾಂತರ: ಪಾಣಾಜೆ ಗ್ರಾಮದ ಅರ್ಧಮೂಲೆ ವೈನ್‌ಶಾಪ್ ಬಳಿ ಕೋಳಿಅಂಕದ ವಿಚಾರದಲ್ಲಿ ಆರ್ಲಪದವಿನ ಪ್ರಕಾಶ್(28) ಎಂಬಾತನಿಗೆ ಕೇರಳದ ಇಬ್ಬರು ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೇರಳದ ವಾಣಿನಗರದಲ್ಲಿ ಮೇ 24ರಂದು ಕೋಳಿ ಅಂಕ ನಡೆದ ವಿಚಾರದಲ್ಲಿ ಪ್ರಕಾಶ್ ಗಲಾಟೆ ಮಾಡಿದ್ದರೆಂಬ ಕಾರಣ ಕೇರಳದ ಧನಂಜಯ ಮತ್ತು ಪುನೀತ್ ಎಂಬುವರು ಮರುದಿನ ರಾತ್ರಿ ಪಾಣಾಜೆ ಗ್ರಾಮದ ಅರ್ಧಮೂಲೆ ವೈನ್‌ಶಾಪ್ ಬಳಿಯಿದ್ದ ಪ್ರಕಾಶ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net