ರಾಮನಾಮ ಜಪದಿಂದ ಕಷ್ಟಗಳು ದೂರ : ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು ಆಶೀರ್ವಚನ

New Project (20)
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ರಾಮನಾಮ ಜಪದಿಂದ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖಶಾಂತಿ ನೆಮ್ಮದಿ ಸಾಧ್ಯವಿದೆ. ಇದರಿಂದ ಜೀವನ ಪಾವನವಾಗಲಿದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು ಹೇಳಿದರು.

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ನಾಮ ಜಪ ಅಭಿಯಾನದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿ ಇಲ್ಲಿನ ರಾಮ ಮಂದಿರದಲ್ಲಿ ನಿರಂತರ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಕಿನ್ನಿಗೋಳಿ ಶ್ರೀ ರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್, ಸಮಿತಿಯ ಉಪಾಧ್ಯಕ್ಷ ಆದಿತ್ಯ ಎಂ.ಕಾಮತ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಮಂಜುನಾಥ ಮಲ್ಯ, ರಾಘವೇಂದ್ರ ಪ್ರಭು, ನಾಮದೇವ ಕಾಮತ್, ಗಣೇಶ್ ಪ್ರಸಾದ್ ಕಾಮತ್, ಗುರುದತ್ತರಾವ್, ರಾಜೇಶ್ ಕಾಮತ್, ಸಚ್ಚಿದಾನಂದ ಭಟ್, ರಘುವೀರ ಕಾಮತ್, ಅನಂತ ಕಾಮತ್, ಭಾಸ್ಕರ ಶೆಣೈ, ಮಾತೃ ಮಂಡಳಿಯ ಭಾರತೀ ಶೆಣೈ, ವಿಜಯಾ ಪ್ರಭು, ರಾಧಾ ಶೆಣೈ, ವಾರಿಜಾ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್, ರಘುವೀರ ಕಾಮತ್, ಸಂಧ್ಯಾ ಮಲ್ಯ, ನಂದಿತಾ ರಾವ್ ಮತ್ತಿತರಿದ್ದರು. ಮಂದಿರ ಅಧ್ಯಕ್ಷ ರಾಜೇಶ್ ನಾಯಕ್ ಸ್ವಾಮೀಜಿಯವರನ್ನು ಗೌರವಿಸಿದರು. ಗಿರೀಶ್ ಭಟ್ ಪ್ರಸ್ತಾವನೆಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net