

ಕಲಬುರಗಿ ಜಿಲ್ಲಾಧ್ಯಂತ ಸಂಭ್ರಮದ ಆಷಾಢ ಏಕಾದಶಿ | ಸರದಿ ಸಾಲಿನಲ್ಲಿ ನಿಂತು ಪಾಂಡುರ0ಗನ ದರ್ಶನ ಪಡೆದ ಭಕ್ತರು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಸಂಭ್ರಮದಿAದ ಆಷಾಢ ಏಕಾದಶಿ ಆಚರಿಸಲಾಯಿತು. ವಿವಿಧ ಮಂದಿರಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಬ್ರಹ್ಮಪುರ ಬಡಾವಣೆಯ ದೇಶಮುಖ ವಾಡಾದಲ್ಲಿ ಆಷಾಢಿ ಉತ್ಸವದ ನಿಮಿತ್ತ ಬುಧವಾರ ಬೆಳಗ್ಗೆ ಶ್ರೀ ರುಕ್ಮಿಣಿ ಪಾಂಡುರAಗ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪ್ರಾಂಗಣದಲ್ಲಿ ಭಕ್ತರ ಮಧ್ಯೆ ಹನುಮ ವಾಹನ ಸೇವೆ ನೆರವೇರಿತು. ಬಡಾವಣೆ ಭಕ್ತರು ಪಾಂಡುರAಗನ ದರ್ಶನ ಪಡೆದು ಕೃತಾರ್ಥರಾದರು.
ಪಂ.ಹನುAತಾಚಾರ್ಯ ಸರಡಗಿ, ಪಂ.ವಿಷ್ಣುದಾಸಾಚಾರ್ಯ ಖಜೂರಿ, ಪಂ.ಗುರುಮಧ್ವಾಚಾರ್ಯ ನವಲಿ, ಪಂ.ಅಭಯಾಚಾರ್ಯ, ಭೀಮಸೇನಾಚಾರ್ಯ ಜೋಶಿ ಪ್ರವಚನ ನೀಡಿದರು. ವಿವಿಧ ಸಂಘಗಳಿAದ ಭಜನೆ ನೆರವೇರಿತು. ದೇವರಾವ್ ದೇಶಮುಖ, ಪಾಂಡುರAಗ ದೇಶಮುಖ, ಅಭಿಜಿತ್ ದೇಶಮುಖ, ಅಶ್ವಿನ್ ದೇಶಮುಖ, ಅಂಬರೀಷ ದೇಶಮುಖ, ಗಿರಿಯಾಚಾರ್ಯ ಪೂಜಾರ, ಅಶ್ವತ್ಥ, ಗೋವಿಂದ ಕುಲಕರ್ಣಿ, ಜಯತೀರ್ಥ ಜೋಶಿ, ಸಂಜೀವ ಕುಲಕರ್ಣಿ, ಉಡುಪಿ ಪುರೋಹಿತ್, ಕೃಷ್ಣಾಚಾರ್ಯ ಜೋಶಿ ಅಲ್ಲೂರ್ ಇತರರಿದ್ದರು.
ಜೇವರ್ಗಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಾರಾಯಣ ಮಾಡುವ ಮೂಲಕ ಆಷಾಢ ಏಕಾದಶಿಯನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಶ್ರೀ ಸತ್ಯಪ್ರಮೋದತೀರ್ಥ ಪಾರಾಯಣ ಸಂಘದ ಹಿರಿಯರು, ಪದಾಧಿಕಾರಿಗಳು ನಿರಂತರ ವಿಷ್ಣು ಸಹಸ್ರನಾಮ (ಬುಧವಾರ ಬೆಳಗ್ಗೆ ೬ರಿಂದ ಗುರುವಾರ ಬೆಳಗ್ಗೆ ೬ರವರೆಗೆ) ಪಾರಾಯಣ ನಡೆಸಿದರು.