

ಕಲಬುರಗಿಯಲ್ಲಿ ಆಶಾ ಕಾರ್ಯಕರ್ತೆಯರ ಸಮಾವೇಶ / ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ಸಂಬಳ ಸಿಗುತ್ತಿಲ್ಲ. ಬದುಕು ಕಷ್ಟದಲ್ಲಿ ಸಾಗಿಸುತ್ತಿz್ದÁರೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಹೇಳಿದರು.
ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಮಾತನಾಡಿದ ಅವರು, ೧೫ ವರ್ಷಗಳಿಂದಲೂ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರನ್ನು ಸರ್ಕಾರಿ ನೌಕರರು ಅಥವಾ ಕಾರ್ಮಿಕರು ಎಂದು ಪರಿಗಣಿಸುತ್ತಿಲ್ಲ ಎಂದು ದೂರಿದರು.
ಹಗಲಿರುಳು ದುಡಿದರೂ ಕನಿಷ್ಠ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿಲ್ಲ. ಸಮಾಜದ ಆರೋಗ್ಯ ಕಾಪಾಡುವ ಇವರನ್ನೇ ಅನಾರೋಗ್ಯದ ಸ್ಥಿತಿಯಲ್ಲಿ ಇಡಲಾಗಿದೆ. ಸರ್ಕಾರ ಕಣ್ಣು ತೆರೆದು ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕು ಎಂದು ಆಗ್ರಹಿಸಿದರು.
ಅಧ್ಯP್ಷÀತೆ ವಹಿಸಿದ್ದ ಜಿ¯್ಲÁ ಸಂಚಾಲಕ ವಿ.ಜಿ. ದೇಸಾಯಿ ಮಾತನಾಡಿ, ಆಶಾಗಳು ಆರೋಗ್ಯ ಇಲಾಖೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದರೂ ಯಾವುದೇ ಕಾನೂನುಬದ್ಧ ಸೌಲಭ್ಯ ನೀಡದೆ ಕೆಲಸದ ಹೊರೆ ಹೆಚ್ಚಿಸಿ ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಈ ಶೋಷಣೆ ನಿಲ್ಲಬೇಕಾದರೆ ಸಂಘಟಿತ ಹೋರಾಟ ಅಗತ್ಯ ಎಂದು ಪ್ರತಿಪಾದಿಸಿದರು.
ಸಂಘಟನೆ ಜಿ¯್ಲÁ ಕಾರ್ಯದರ್ಶಿ ಎಸ್.ಎಂ. ಶರ್ಮಾ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ, ನಾಗವೇಣಿ, ಮಲ್ಲಮ್ಮ ಇತರರಿದ್ದರು. ಶಿವಲಿಂಗಮ್ಮ ಸ್ವಾಗತಿಸಿದರು. ವಿಜಯಲಕ್ಷಿö್ಮÃ ಕಮಲಾಪುರ ನಿರೂಪಣೆ ಮಾಡಿದರು.
ಜಿ¯್ಲÁ ಆಶಾ ಕಾರ್ಯಕರ್ತೆಯರ ನೂತನ ಸಮಿತಿ ರಚಿಸಲಾಯಿತು. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಸಾಮಾಜಿಕ ಭದ್ರತೆ ಖಾತ್ರಿಪಡಿಸಿ ಅಗತ್ಯ ಬಜೆಟ್ ಒದಗಿಸಬೇಕು ಎಂಬ ಪ್ರಮುಖ ಅಂಶಗಳನ್ನು ಒಳಗೊಂಡ ಗೊತ್ತುವಳಿ ಅಂಗೀಕರಿಸಲಾಯಿತು.