

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನಲ್ಲಿ ಗೌರವಧನ ಪಾವತಿಸಲು ಸರ್ಕಾರ 2ನೇ ತ್ರೈಮಾಸಿಕ ಅನುದಾನ (ಜುಲೈನಿಂದ ಸೆಪ್ಟೆಂಬರ್‌ವರೆಗೆ) 61. 5 ಕೋಟಿ ರೂ. ಬಿಡುಗಡೆಗೊಳಿಸಿ, ನಿಗದಿತ ಉದ್ದೇಶಕ್ಕೆ ಬಳಕೆ ಮಾಡುವಂತೆ ಷರತ್ತು ಬದ್ಧ ಆದೇಶ ಮಾಡಿದೆ.
ಈ ಹಣವನ್ನು ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಹಾಗೂ ಅನುದಾನವನ್ನು ನಿಯಮಿತವಾಗಿ ಖಜಾನೆ ಮೂಲಕವೇ ಬಳಕೆ ಮಾಡಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪವಿತ್ರ ತಿಳಿಸಿದ್ದಾರೆ.