ಆಸರೆ ಸಂಜೀವಿನಿ ಒಕ್ಕೂಟ ವಾರ್ಷಿಕ ಸಭೆ

aasare
ಮಜೂರು ಗ್ರಾಪಂ ಆಸರೆ ಸಂಜೀವಿನಿ ಒಕ್ಕೂಟದ ಮಹಾಸಭೆಯನ್ನು ಶಶಿಪ್ರಭಾ ಶೆಟ್ಟಿ ಉದ್ಘಾಟಿಸಿದರು
Published on

ಪಡುಬಿದ್ರಿ: ಮಜೂರು ಗ್ರಾಪಂನ ಆಸರೆ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಮಜೂರು ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಮಹಿಳೆಯರು ಸ್ವಉದ್ಯೋಗ ಮಾಡುವಂತೆ ಪ್ರೇರೇಪಿಸಿದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ಒಕ್ಕೂಟದ ಕೋಶಾಧಿಕಾರಿ ಸ್ವಾತಿ ಶೆಟ್ಟಿ, ಗ್ರಾಪಂ ಸದಸ್ಯರು, ಕೃಷಿ ಸಖಿ, ಪಶು ಸಖಿ, ಕೃಷಿ ಉದ್ಯೋಗ ಸಖಿ, ಒಕ್ಕೂಟದ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪೂಜಾ, ಶಕುಂತಳಾ ಡೆಂೆ ಜ್ವರ ಬಗ್ಗೆ, ಕಾಪು ತಾಲೂಕು ಮೇಲ್ವಿಚಾರಕಿ ಮಹಿಳಾ ರೈತ ಉತ್ಪಾದಕ ಸಂಘದ ಬಗ್ಗೆ ಮಾಹಿತಿ ನೀಡಿದರು. ವಿಶಾಲಾ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ಆಶಾ ಆಚಾರ್ಯ ನಿರೂಪಿಸಿದರು. ಅನುಪಮಾ ವಾರ್ಷಿಕ ವರದಿ ಮಂಡಿಸಿದರು. ನಳಿನಾಕ್ಷಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net