

ಕೊಟ್ಟೂರು: ವಿಧಾನಸಭಾ ಚುನಾವಣೆಗೆ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಗಳನ್ನಾಗಿ ಶಿಕ್ಷಕರ ನೇಮಕ ಮಾಡಬಾರದೆಂದು 19 ಶಿಕ್ಷಕರು ಸಾಮೂಹಿಕ ರಾಜೀನಾಮೆಯನ್ನು ತಹಸೀಲ್ದಾರ್ ಎಂ.ಕುಮಾರಸ್ವಾಮಿಗೆ ಸಲ್ಲಿಸಿದರು.
ಇದನ್ನೂ ಓದಿ: ಬಿಎಲ್‌ಒ ಕರ್ತವ್ಯಕ್ಕೆ ನಿಯೋಜನೆ ಬೇಡ
ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಯಾಗಿ(ಬಿಎಲ್‌ಒ) ನೇಮಿಸಿದ್ದು, ಚುನಾವಣೆ ವರ್ಷಗಳಲ್ಲಿ ನಿರಂತರ ಮತಪಟ್ಟಿ ಪರಿಷ್ಕರಣೆ, ಮನೆ ಮನೆ ಸಮೀಕ್ಷೆ, ವೋಟರ್ ಐಡಿಗೆ ಆಧಾರ್ ಕಾರ್ಡ್ ಜೋಡಣೆ ಸೇರಿ ವರ್ಷಪೂರ್ತಿ ಕೆಲಸ ಮಾಡಬೇಕಾಗುತ್ತದೆ.
ಇದರಿಂದ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕಿಗೆ ಅಡಚಣೆಯಾಗುತ್ತದೆ. ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಸಾಮೂಹಿಕ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಶಿಕ್ಷಕರಾದ ಬಿ.ಮುಕ್ತೇಶ, ಶಿವಕುಮಾರ್, ಎಚ್.ದಾದಾಪೀರ್, ಎಸ್.ಶಿವಪ್ಪ, ಬಿ.ಎಂ.ಸೋಮಯ್ಯ, ಆರ್.ವಿಜಯಕುಮಾರ್, ಎಸ್.ಎಂ. ಸುರೇಶ, ಪಿ.ರೆಹಮಾನ್ ಸಾಹೇಬ್, ಕೆ.ಸುನಂದಮ್ಮ, ಬಿ.ಪಿ. ಮಂಜುನಾಥ್ ಇತರರಿದ್ದರು.