ಬಿಎಲ್‌ಒ ಕರ್ತವ್ಯಕ್ಕೆ ನಿಯೋಜನೆ ಬೇಡ

CLK MANAVI 21
Published on

ಚಳ್ಳಕೆರೆ: ತಾಲೂಕಿನ ಮತಗಟ್ಟೆ ಹಂತದಲ್ಲಿ ಮತಗಟ್ಟೆ (ಬಿಎಲ್‌ಒ) ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿರುವ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಬಿಇಒ ಕೆ.ಎಸ್.ಸುರೇಶ್‌ಗೆ ಬಿಎಲ್‌ಒಗಳು ಮನವಿ ಸಲ್ಲಿಸಿದರು.

ಚುನಾವಣಾ ಕಾರ್ಯ ಮತ್ತು ಗುರುತಿನ ಚೀಟಿಗಳ ದಾಖಲಾತಿ ಕೆಲಸಕ್ಕೆ ಶಿಕ್ಷರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಶಾಲಾ ಚಟುವಟಿಕೆಗಳಲ್ಲಿ ಕರ್ತವ್ಯ ಮಾಡಲು ಬಹಳ ಕಷ್ಟವಾಗುತ್ತಿದೆ. ಮಕ್ಕಳ ಶಿಕ್ಷಣ ಪ್ರಗತಿ ಕುಂಠಿತವಾಗುತ್ತಿದೆ ಎಂದು ಶಾಲಾ ಸಮಿತಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಪಾಲಕರು ದೂರುತ್ತಿದ್ದಾರೆ. ಆದ ಕಾರಣ, ಕೂಡಲೇ ಬಿಎಲ್‌ಒ ಸೇವಾ ಕಾರ್ಯದಿಂದ ನಿಯೋಜಿತ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಿ.ಈರಣ್ಣ, ಎಚ್.ಹನುಮಂತರಾಯ, ಸಿ.ಸಣ್ಣಪಾಪಣ್ಣ, ಎನ್.ಮಲ್ಲೇಶ್, ಸೈಯದ್ ರಹಮತ್‌ವುಲ್ಲಾ, ಜೆ.ಟಿ.ಶಾಂತಕುಮಾರಿ, ಎನ್.ಚಿತ್ತಯ್ಯ, ಟಿ.ಡಿ.ಬಸವರಾಜ್, ಬಿ.ಗುರುಸ್ವಾಮಿ, ಎಲ್.ಮಂಜಣ್ಣ, ನಾಗರತ್ನಾ, ಉಮೇಶ್, ಆರ್.ಎನ್.ಶ್ರೀದೇವಿ, ಜಿ.ಟಿ.ಪ್ರಮೀಳಾ, ಆರ್.ಸುಬ್ರಹ್ಮಣ್ಯಶಾಸ್ತ್ರಿ, ಎಚ್.ಗಿರೀಶ್, ಬಿ.ಸುರೇಂದ್ರ, ಸುರೇಶ್, ಬಿ.ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net