ಆರ್ಯ ವೈಶ್ಯ ಬ್ಯುಸಿನೆಸ್ ಎಕ್ಸ್‌ಪೋ; ಶುಬ್ ಕನ್ವೆನ್ಷನ್ ಸೆಂಟರ್​ನಲ್ಲಿ ಮೇಳ

shubh7
Published on

ಬೆಂಗಳೂರು: ಆರ್ಯ ವೈಶ್ಯ ಬ್ಯುಸಿನೆಸ್ ಫ್ಯಾಮಿಲಿ ಎಕ್ಸ್‌ಪೋಗೆ ಶನಿವಾರ ಚಾಲನೆ ದೊರೆಯಿತು. ಜೆಪಿನಗರದ ಬ್ರಿಗೇಡ್ ಮಿಲೇನಿಯಮ್ ಬಳಿ ಇರುವ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರದಿಂದ ಎರಡು ದಿನ ಎಕ್ಸ್‌ಪೋ ನಡೆಯಲಿದೆ.

ಆಹಾರ, ಬಟ್ಟೆ, ಕಚೇರಿ ಸಾಮಗ್ರಿಗಳು, ಜೀವನಶೈಲಿ ಗೃಹಾಸಕ್ತಿಯ ಸಾಮಾನುಗಳು, ಮೆಕಪ್, ಆರೋಗ್ಯ, ಎಲೆಕ್ಟ್ರಾನಿಕ್ಸೃ್, ಆಭರಣಗಳು ಮತ್ತು ಇನ್ನೂ ಅನೇಕ ಇತರ ವಸ್ತುಗಳೊಂದಿಗೆ 200ಕ್ಕೂ ಹೆಚ್ಚು ಸ್ಟಾಲ್‌ಗಳು ಮೇಳದಲ್ಲಿ ಭಾಗವಹಿಸಿವೆ.

ಆರ್ಯ ವೈಶ್ಯ ಸಮುದಾಯದ ಉದ್ಯಮಿಗಳು, ವ್ಯಾಪಾರಿಗಳು, ವಿವಿಧ ಕೈಗಾರಿಕೆಗಳಿಂದ ಬಂದಿರುವ ವೃತ್ತಿಪರರನ್ನು ಒಟ್ಟುಗೂಡಿಸಲು ವಿನ್ಯಾಸಗೊಳಿಸಲಾದ ಬಿ-ಶಿಪ್ ಎಕ್ಸ್‌ಪೋ, ವಿಶಿಷ್ಟ ವೇದಿಕೆಯನ್ನು ನಿರ್ಮಿಸಿದೆ. ಎರಡು ದಿನಗಳ ಮೇಳದಲ್ಲಿ ವಿವಿಧ ಕಾರ್ಯಾಗಾರ, ಗೋಷ್ಠಿ, ಮನೋರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಾಸವಿ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆರಂಭವಾದ ಮೇಳದಲ್ಲಿ

ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ,ಶಾಸಕ ಸತೀಶ್ ರೆಡ್ಡಿ, ಸಂಘಟಕರಾದ ನಾಗರಾಜ್ ಬೈಸಾನಿ, ಬಿ-ಶಿಪ್ ಚೇರ್ಮನ್ ಶ್ರೀಧರ್ ಎಸ್. ಆರ್. ಮತ್ತಿತರರು ಪಾಲ್ಗೊಂಡಿದ್ದರು.

ಮೇಳವು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ನಾಗರೀಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net