ಕಲಬುರಗಿ ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆ

IMG-20230827-WA0025
Published on

ಭಾವಗಿ ಗೌರವಾಧ್ಯಕ್ಷ-  ರಾಜಕುಮಾರ ಅಧ್ಯಕ್ಷ  -ಗುತ್ತೇದಾರ ಕಾರ್ಯದರ್ಶಿ- ಸುರೇಶ ಗುತ್ತೇದಾರ ಸಂಘಟನಾ ಕಾರ್ಯದರ್ಶಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕರ್ನಾಟಕ ರಾಜ್ಯ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ದಿ ಸಂಘದ  ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಭಾನುವಾರ ನಗರದ ಅತಿಥಿ ಗೃಹದಲ್ಲಿ ಜರುಗಿದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ  ಸಮಾಲೋಚನೆ ನಡೆಸಿ  ಒಮ್ಮತದಿಂದ ಆಯ್ಕೆ ಮಾಡಲಾತಯಿತು.
ಗೌರವಾಧ್ಯಕ್ಷರಾಗಿ ವಿಠ್ಠಲ್ ಭಾವಗಿ, ಅಧ್ಯಕ್ಷರಾಗಿ ರಾಜಕುಮಾರ ಗುತ್ತೇದಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನರಸಯ್ಯ ಗುತ್ತೇದಾರ ಬೆಳಗುಂಪಾ  ಸೇರಿದಂತೆ ಉಳಿದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವಿವರ ಹೀಗಿದೆ.
ದಸ್ತಯ್ಯ ಶಿವಯ್ಯ ಗುತ್ತೇದಾರ, ವೆಂಕಟೇಶ ತೇಲಂಗ (ಉಪಾಧ್ಯಕ್ಷ),  ನರಸಯ್ಯ ಗುತ್ತೇದಾರ ಬೆಳಗುಂಪಾ (ಪ್ರಧಾನ ಕಾರ್ಯದರ್ಶಿ), ಚಂದ್ರಕಾAತ ಗುತ್ತೇದಾರ ರಾವೂರ (ಖಜಾಂಚಿ),ರಾಘವೇAದ್ರ ಗುತ್ತೇದಾರ (ಆಂತರಿಕ ಲೆಕ್ಕ ಪರಿಶೋಧಕ), ಸುರೇಶ.ವೈ.ಗುತ್ತೇದಾರ ಬೆಡಸೂರ,ಅಶೋಕ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ). ರವೀಂದ್ರ ಗುತ್ತೇದಾರ, ಸ್ವರೂಪಕುಮಾರ (ಸಹ ಕಾರ್ಯದರ್ಶಿ), ಭಾರತಿಬಾಯಿ ರಾಜಕುಮಾರ ಗುತ್ತೇದಾರ (ಸಾಂಸ್ಕೃತಿಕ ಕಾರ್ಯದರ್ಶಿ), ಕಾರ್ಯಕಾರಿ ಸದಸ್ಯರಾಗಿ ರಾಹುಲ್ ಗುತ್ತೇದಾರ, ಬಸವರಾಜಯ್ಯಾ ಗುತ್ತೇದಾರ, ರಾಜಶೇಖರ ಗುತ್ತೇದಾರ,ಶಾಂತಕುಮಾರ ಅಮಲಯ್ಯ ಗುತ್ತೇದಾರ,ರಾಮು ಕಲಾಲ್, ಮಹಾನಂದಾ ಪಿಡಿಒ,ಸುಭಾಷ ರಾಜಣ್ಣ ಇಟಿಕರ ನೇಮಕಗೊಂಡರು.
ಬಳಿಕ ಸಭೆಯನ್ನುದ್ದೇಶಿಸಿ ಹಿರಿಯರಾದ ಶಶಿಧರ ಬೆಡಸೂರ ಮಾತನಾಡಿ, ಸಂಘಟನೆಯನ್ನು ಬಲಪಡಿಸುವುದರ ಜತೆಗೆ ನೌಕರರ ಯೋಗಕ್ಷೇಮ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದು, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಇನ್ನಿತರ ಸಮಾಜಮುಖಿ ಕೆಲಸಗಳನ್ನು ಸಂಘದಿಂದ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು. ಸರ್ಕಾರಿ, ಅರೆಸರ್ಕಾರಿ ಸೇರಿದಂತೆ  ಈಡಿಗ ಸಮಾಜದ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net