ಹಲವು ಕಲೆಗಳ ಸಮ್ಮಿಶ್ರಣ ರಂಗಭೂಮಿ

hyr
ಹಿರಿಯೂರಿನ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯಗಾರವನ್ನು ಪ್ರಾಚಾರ್ಯ ಡಾ.ವಿ.ಬಸವರಾಜ ಉದ್ಘಾಟಿಸಿದರು. ಡಾ. ಅವಿನಾಶ್, ಗಣೇಶಯ್ಯ ಇದ್ದರು.
Published on

ಹಿರಿಯೂರು: ರಂಗಭೂಮಿ ಹಲವು ಕಲೆಗಳ ಸಮ್ಮಿಶ್ರಮಣದ ಪರಿಣಾಮಕಾರಿ ಮಾಧ್ಯಮ. ಇದನ್ನು ಶಿಕ್ಷಕರು ಕರಗತ ಮಾಡಿಕೊಂಡರೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸಬಹುದು ಎಂದು ಪ್ರಾಚಾರ್ಯ ಡಾ.ವಿ. ಬಸವರಾಜ್ ತಿಳಿಸಿದರು.

ನಗರದ ಜ್ಞಾನಭಾರತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬುಧವಾರ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಶಿಕ್ಷಣದಲ್ಲಿ ರಂಗಕಲೆ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಂವಹನ-ನಟನಾ ಕೌಶಲವನ್ನು ಶಿಕ್ಷಕರು ಬೋಧನೆಯಲ್ಲಿ ಬಳಸಿಕೊಂಡಾಗ ಪರಿಣಾಮಕಾರಿಯಾಗುತ್ತದೆ. ಪ್ರಶಿಕ್ಷಣಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಾಹಿತ್ಯದ ಅಭಿರುಚಿ, ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಲು ಸಹಾಯವಾಗುತ್ತದೆ ಎಂದರು.

ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲೇ ವಿವಿಧ ಆಯಾಮಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕನಾಗಿ ಹೊರ ಹೊಮ್ಮಲು ಸಾಧ್ಯವಿದೆ. ಪ್ರಸ್ತುತ ಈ ವಿಶಿಷ್ಠ ಪುರಾತನ ಕಲೆಗಳಿಂದ ವಿದ್ಯಾರ್ಥಿಗಳು, ಯುವಕರು ವಿಮುಖರಾಗುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಮಾತನಾಡಿ, ರಂಗಭೂಮಿ ಆಳ, ಅರಿವು, ನವರಸಗಳು, ಅಭಿನಯದ ರೂಪಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net