ಕಲಾವಿದರಿಗೆ ಸಂಕಷ್ಟ ತಂದಿಟ್ಟ ಕರೊನಾ

12 YLP 02
Published on

ಯಲ್ಲಾಪುರ: ಕರೊನಾದಿಂದ ಕಲಾವಿದರ ಬದುಕು ಕಷ್ಟಕ್ಕೆ ಸಿಲುಕಿದೆ. ಪ್ರೇಕ್ಷಕರಿಗೂ ಕಲೆಯ ಆಸ್ವಾದನೆ ದೊರೆಯದೇ ಜಡತ್ವ ಬಂದಿದೆ. ಇಂತಹ ಕಾಲಘಟ್ಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಪಂಚಾಯತ್​ರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ತಾಲೂಕಿನ ಮಾಗೋಡಿನ ಮಹಾಗಣಪತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಯಕ್ಷ ಸಿಂಚನ ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಅವರನ್ನು ಗೌರವಿಸಲಾಯಿತು. ಹಿರಿಯ ಪುರೋಹಿತ ವೇ. ನಾರಾಯಣ ಭಟ್ಟ ಮೊಟ್ಟೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬಾ ದೇವಸ್ಥಾನ ಅಧ್ಯಕ್ಷ ಡಿ. ಶಂಕರ ಭಟ್ಟ, ದೇವಸ್ಥಾನ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಸಂಘಟಕ ಸುಬ್ಬಣ್ಣ ಕಂಚಕಲ್, ಎನ್.ಎಸ್. ಭಟ್ಟ ನಂದೊಳ್ಳಿ ಇತರರಿದ್ದರು.

ಯುವ ಕಲಾವಿದರಿಂದ ನಡೆದ ಯಕ್ಷಗಾನ, ನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಭಾಗವತರಾಗಿ ಗಣೇಶ ಆಚಾರ್ಯ ಬಿಲ್ಲಾಡಿ, ವಿಘ್ನೕಶ್ವರ ಹೆಗಡೆ ಕುಂಟೆಮನೆ, ಶಶಾಂಕ ಬೋಡೆ, ಚಿಂತನಾ ಹೆಗಡೆ ಮಾಳ್ಕೋಡ ವಿವಿಧ ಪೌರಾಣಿಕ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net