ಶ್ರುತಿ, ಲಯ, ತಾಳದಿಂದ ಕಲೆಗೊಂದು ರೂಪ

BYN-May10-1-RITHAM BYNDOOR
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಆಂಗ್ಲ ಭಾಷೆಯ ರಿದಂ ಎನ್ನುವುದಕ್ಕೆ ಕನ್ನಡದ ಲಯ ಸಂವಾದಿಯಾದ ಪದ. ಈ ಪದಕ್ಕೆ ನುಡಿ, ಚಲನೆ, ಶ್ರುತಿ, ತಾಳ ಎಂಬ ಹಲವು ಅರ್ಥವಿದೆ. ಈ ಲಯ, ತಾಳ ಮನುಷ್ಯ ನಿರ್ಮಿತ ಶಾಸ್ತ್ರ್ರವಾಗಿದ್ದು ಇವೆಲ್ಲವು ಹೊಂದಿಕೆಯಾದಲ್ಲಿ ಅದಕ್ಕೆ ಕಲೆಯ ರೂಪ ಸಿಗುತ್ತದೆ. ಅದು ಯಕ್ಷಗಾನ, ನಾಟಕ, ಸಂಗೀತ, ನೃತ್ಯ ಮುಂತಾದ ಕಲಾ ಪ್ರಾಕಾರಗಳ ಮೂಲಕ ಅರಳುವಂತೆ ವಾಡುತ್ತದೆ ಎಂದು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಹೇಳಿದರು.

ಶ್ರೀ ಶಾರದಾ ವೇದಿಕೆಯಲ್ಲಿ ಶುಕ್ರವಾರ ಲಾವಣ್ಯ ಆಶ್ರಯದಲ್ಲಿ ನಡೆಯುತ್ತಿರುವ ರಿದಂ ನೃತ್ಯ ಮತ್ತು ಕಲಾ ಶಾಲೆಯ 25ನೇ ವರ್ಷದ ರಜತ ಪರ್ವ ಚಾಲನಾ ಮಹೋತ್ಸವ ಉದ್ಘಾಟಿಸಿ ವಾತನಾಡಿದರು.

ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ನಿಯೋಜಿತ ಸಹಾಯಕ ಗವರ್ನರ್ ಐ. ನಾರಾಯಣ ರಜತ ಪರ್ವದ ಲೋಗೋ ಬಿಡುಗಡೆಗೊಳಿಸಿದರು. ಸಂಗೀತ ಕಲಾವಿದ ರಾವೇಂದ್ರ ಉಡುಪರನ್ನು ಗೌರವಿಸಲಾಯಿತು.

ಶ್ರೀ ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಐತಾಳ್, ವಿಕ್ರಂ ಕ್ರಿಕೆಟ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ., ಶ್ರಿ ೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಯಡ್ತರೆ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಣರ್ ಇದ್ದರು. ಸಂಸ್ಥೆ ಸಂಚಾಲಕ, ನಿರ್ದೇಶಕ ನಾಗೇಂದ್ರ ಕುವಾರ್ ಬಂಕೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ಮೂರ್ತಿ ಡಿ. ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು. ರಾಜೇಶ ನಾಯ್ಕ ವಂದಿಸಿದರು.

ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯದ ಕೊರತೆಗಳಿದ್ದರೂ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯ, ಕಲಾ ಪ್ರಾಕಾರವನ್ನೊಳಗೊಂಡ ಸರ್ವಾಂಗೀಣ ಶಿಕ್ಷಣ ದೊರೆಯಬೇಕು. -ಐ.ನಾರಾಯಣ, ರೋಟರಿ ಜಿಲ್ಲಾ ನಿಯೋಜಿತ ಸಹಾಯಕ ಗವರ್ನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net