

ಸಿಂಧನೂರು: ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ, ಪರಂಪರೆ ಮರೆಯಾಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಇದನ್ನೂ ಓದಿ: ನಾಡಿನ ಸಂಸ್ಕೃತಿ ಉಳಿಸಲು ಯುವಜನರು ಮುಂದಾಗಲಿ
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನಲ್ಲಿ ಬುಧವಾರ ಕಾಲೇಜ್ ಶಿಕ್ಷಣ ಇಲಾಖೆ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಸಾಂಸ್ಕೃತಿಕ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ ಆಯೋಜಿಸುವ ಮೂಲಕ ಸಾಂಪ್ರದಾಯಿಕ ಜಾನಪದ ಕಲೆ, ಸಂಸ್ಕೃತಿ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯಾಂತ್ರಿಕತೆಯ ಪ್ರಭಾವ ಹೆಚ್ಚಾಗಿ ಜಾನಪದ ಕಲೆ ಅವನತಿ ಹೊಂದುತ್ತಿದೆ. ಜಾನಪದ ಜಾತ್ರೆ ಉತ್ಸವಗಳು ಯುವ ಪೀಳಿಗೆಯಲ್ಲಿ ಕಲೆಗಳ ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಮುಖ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಹತ್ತು ವರ್ಷಗಳಿಂದೆ ಆರಂಭಗೊಂಡ ಕಾಲೇಜ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುವುದು ಸ್ವಾಗತಾರ್ಹ. ಉಪನ್ಯಾಸಕರು, ವಿದ್ಯಾರ್ಥಿಗಳು ಸಂಪ್ರದಾಯ ಉಡುಗೆಯಲ್ಲಿ ಕಾಲೇಜ್‌ಗಳಿಗೆ ಬಂದರೆ ಇನ್ನೂ ಹೆಚ್ಚಿನ ಕಳೆ ಬರುತ್ತದೆ. ಕಾಲೇಜ್ ಅಭಿವೃದ್ಧಿ ನಿಟ್ಟಿನಲ್ಲಿ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಅನುದಾನ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಪ್ರಾಚಾರ್ಯೆ ಡಾ.ಲಕ್ಷ್ಮೀದೇವಿ ಮಾತನಾಡಿ, ಜಾನಪದ ಉತ್ಸವದಿಂದ ವಿದ್ಯಾರ್ಥಿಗಳಲ್ಲಿ ಜಾನಪದ ಸಾಂಸ್ಕೃತಿಕ ಬಗ್ಗೆ ಅರಿವು ಮೂಡಿಸವಲ್ಲಿ ಸಹಕಾರಿಯಾಗಿದೆ. ಜಾನಪದ ಕಲೆ, ಸಂಸ್ಕೃತಿ ನಮ್ಮ ಹೆಮ್ಮೆಯಾಗಿದೆಂದರು.
ಸಹ ಪ್ರಾಧ್ಯಾಪಕ ಎನ್.ನೂರ್‌ಬಾಷಾ, ನಿವೃತ್ತ ಮುಖ್ಯಶಿಕ್ಷಕ ಬೀರಪ್ಪ ಶಂಭೋಜಿ, ಮನುಜಮತ ಬಳಗ ಅಧ್ಯಕ್ಷ ಡಿ.ಎಚ್.ಕಂಬಳಿ, ಸಹಪ್ರಾಧ್ಯಾಪಕಿ ಡಾ.ರೇಣುಕಾ ಎಂ.ರೆಡ್ಡಿ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಅಮರೇಶ, ಸಾಂಸ್ಕೃತಿಕ ವಿಭಾಗ ಸಂಯೋಜಕ ಮಹಾಂತಪ್ಪ ಕೊಡಗಲಿ, ಉಪನ್ಯಾಸಕ ಡಾ.ಕೆ.ಮುದುಕಪ್ಪ , ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪನ್ಯಾಸಕ ಪರಪ್ಪ, ಪ್ರಮುಖರಾದ ಸಿದ್ದಲಿಂಗಪ್ಪ, ಡಾ.ಬಸವರಾಜ ಬಳಿಗೇರ ಇತರರಿದ್ದರು.