ಆನ್​​ಲೈನ್​​ ಜೂಜಾಟದ ಹುಚ್ಚು ಹಿಡಿಸಿಕೊಂಡಿದ್ದವನಿಗೆ ಚಳಿ ಬಿಡಿಸಿದ ಪೊಲೀಸರು: ಕೊನೆಗೂ ಸಿಕ್ಕಿ ಬಿದ್ದ ಬೈಕ್​ ಕಳ್ಳ

CHN-Bikethept
Published on

ಚಾಮರಾಜನಗರ: ಆನ್ ಲೈನ್ ಜೂಜಾಟಕ್ಕಾಗಿ ಕಂಡ ಕಂಡಲ್ಲಿ ಬೈಕ್​ ಕದಿಯುತ್ತಿದ್ದವನು ಈಗ ಕೊಳ್ಳೇಗಾರ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರದೀಪ್ ಕುಮಾರ್ (35) ಬಂಧಿತ ಆರೋಪಿ.ಆರು ತಿಂಗಳಿಂದ ಆನ್ ಲೈನ್ ಜೂಜಾಟದ ಹುಚ್ಚು ಹೆಚ್ಚಿಸಿಕೊಂಡಿದ್ದ ಈತ ಸಿಕ್ಕ ಸಿಕ್ಕಲಿ ಬೈಕ್​ ಕಳ್ಳತನ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದ.

ಆನ್​ಲೈನ್​ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ ಈತ, ಆರು ತಿಂಗಳಿನಿಂದ ಜೂಜಾಟವಿಲ್ಲದೇ ಇರಲು ಆಗುತ್ತಿರಲಿಲ್ಲ. ಇದಕ್ಕಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ. ಚಾಮರಾಜನಗರ 2, ಕೊಳ್ಳೇಗಾಲ 3, ನಂಜನಗೂಡಿನಲ್ಲಿ 2 ಒಟ್ಟಾರೆ ಏಳು ಬೈಕ್ ಕದ್ದಿದ್ದ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕದ್ದ ಬೈಕ್ ಮಾರಾಟ ಮಾಡಿ ಜೂಜಿನಲ್ಲಿ‌ ಹಣ ಕಳೆಯುತ್ತಿದ್ದ. ಇದನ್ನೇ ಕಾಯಕ ಮಾಡಿಕೊಂಡಿದ್ದ ಈತ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net