ಕನಕಪುರ: ನಗರದ ಬಸವೇಶ್ವರ ಬಡಾವಣೆಯಲ್ಲಿ ಶನಿವಾರ ಇಬ್ಬರು ಕಳ್ಳರನ್ನು ಬಂಧಿಸಿರುವ ಪೊಲೀಸರು 17 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ, ಬೆಳ್ಳಿ ವಸ್ತುಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಮೆಹೆಂದಿ ನಗರದ ಗಾರೆ ಕೆಲಸದ ಮಹಮ್ಮದ್ ಅಲೀ (30), ಬೆಂಗಳೂರಿನ ನೀಲಸಂದ್ರದ ಮುನಿಸ್ವಾಮಿ ಲೇಔಟ್ನ ಮಜಾದ್ ಅಲೀ (44) ಬಂಧಿತರು.
ಬಸವೇಶ್ವರ ಬಡಾವಣೆಯಲ್ಲಿ ಮೇ 15ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿಗಳು 4 ಕಡೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದರು.
ಎಸ್ಪಿ ಕಾರ್ತಿಕ್ ರೆಡ್ಡಿ ಹಾಗೂ ಎಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಓಂ ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಮಿನೂನ್ ಶಿಲ್ಪಿ ನೇತೃತ್ವದಲ್ಲಿ ಎಸ್ಐಗಳಾದ ಬೇಬಿ ಉಷಾ ಕುಮಾರಿ, ರತ್ನಮ್ಮ, ಸಿಬ್ಬಂದಿ ಶಿವಶಂಕರ, ರಮೇಶ್, ರವಿ, ವಿಶ್ವಾಸ್, ಅನಂತ್ ಕುಮಾರ್, ಮನು, ಶಿವರಾಜು, ಮೊನೀಷ, ಜೀಪ್ ಚಾಲಕ ಶಂಕರಲಿಂಗಯ್ಯ ಭಾಗವಹಿಸಿದ್ದರು.