ಅಕ್ರಮವಾಗಿ ಮರ ಸಾಗಿಸುತ್ತಿದ್ದ ಇಬ್ಬರ ಬಂಧನ

Published on

ಸಕಲೇಶಪುರ: ತಾಲೂಕಿನ ಸುಂಡಹಳ್ಳಿಯಲ್ಲಿ ಇತ್ತೀಚೆಗೆ ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.

ಆಲೂರು ತಾಲೂಕು ಗಂಜಿಗೆರೆ ಗ್ರಾಮದ ದಯಾನಂದ ಹಾಗೂ ಮಾದಿಹಳ್ಳಿಯ ಪ್ರಜ್ವಲ್ ಬಂಧಿತರು. ಸಕಲೇಶಪುರ ಅರಣ್ಯ ವಲಯ ಬೆಳಗೋಡು ಶಾಖಾ ವ್ಯಾಪ್ತಿಯ ಸುಂಡಹಳ್ಳಿ ಗ್ರಾಮದ ಎಸ್.ಎಸ್.ಎಸ್ಟೇಟ್ ಹತ್ತಿರ ತಾರೆ ಮತ್ತು ಹಲಸು ಜಾತಿಯ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ಸಂಬಂಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net