ಅಕ್ರಮವಾಗಿ ರಾಸು ಸಾಗಿಸುತ್ತಿದ್ದ ಇಬ್ಬರ ಬಂಧನ

29-11--krs2
ಕೆ.ಆರ್.ಸಾಗರ ಪೊಲೀಸರು ವಶಕ್ಕೆ ಪಡೆದ ರಾಸುಗಳು.
Published on

ಕೆ.ಆರ್.ಸಾಗರ: ಪೇಪರ್ ಮಿಲ್ ಸರ್ಕಲ್ ಬಳಿ ಗೂಡ್ಸ್ ಆಟೋದಲ್ಲಿ ಬುಧವಾರ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ರಾಸುಗಳನ್ನು ರಕ್ಷಿಸಿದ ಕೆ.ಆರ್.ಸಾಗರ ಪೊಲೀಸರು ಗೂಡ್ಸ್ ಆಟೋ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಿಳಿಕೆರೆ ಮೂಲದ ಚಾಲಕ ಹರೀಶ್ ಮತ್ತು ನಾಗೇಗೌಡ ಬಂಧಿತರು. ಕೆ.ಆರ್.ನಗರದಿಂದ ಬೆಂಗಳೂರು ಕಡೆಗೆ ಅಕ್ರಮವಾಗಿ ರಾಸುಗಳನ್ನು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಪಿಎಸೈ ಬಸವರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಗೂಡ್ಸ್ ಆಟೋ ವಶಕ್ಕೆ ಪಡೆದು ಮೂರು ರಾಸುಗಳನ್ನು ಪಿಂಜರಾಪೋಲ್ ವಶಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net