ಮೂವರು ಸರಗಳ್ಳರ ಬಂಧನ

PHOTO-2024-09-09-16-33-31
Published on

ರಾಮನಗರ: ಬೈಕ್​ ಸವಾರರನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಯತೀಶ್​ (27), ದೇವೇಂದ್ರ (39) ಮತ್ತು ಸುನೀಲ (36) ಬಂದಿತ ಆರೋಪಿಗಳು. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದರು.

ಸಿಕ್ಕಿ ಬಿದ್ದರು: ಇದೇ ಮೇ .22ರ ರಾತ್ರಿ ಬೆಂಗಳೂರು & ಮೈಸೂರು ಹೆದ್ದಾರಿಯ ಸರ್ವೀಸ್​ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿತೀಶ್​ ಕುಮಾರ್​ ಮತ್ತು ನೀರಜ್​ ಕುಮಾರ್​ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿಗಳು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ 5 ಸಾವಿರ ರೂ ನಗದು ಮತ್ತು ಮೊಬೈಲ್​ ಕಸಿದುಕೊಂಡು ಬೈಕ್​ನಲ್ಲಿ ಪರಾರಿ ಆಗಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದು ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಳೆ ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆ ಸಿಪಿಐ ರಮೇಶ್​ ಜಿ.ಪಿ ಅವರ ನೇತೃತ್ವದ ತಂಡ ಟನೆ ಅಂತಿಮವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಮತ್ತೆ ನಾಲ್ಕು ಪ್ರಕರಣಗಳು ಸಹ ಪತ್ತೆಯಾಗಿವೆ.

ಚಿನ್ನಾಭರಣ ವಶ

ಬಂಧಿತರು ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆ, ಪುರ ಪೊಲೀಸ್​ ಠಾಣೆ, ಕಗ್ಗಲಿಪುರ ಪೊಲೀಸ್​ ಠಾಣೆ, ಮಾದನಾಯಕನಹಳ್ಳಿ, ವಿದ್ಯಾರಣ್ಯ ಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದ ತಲಾ ಒಂದೊಂದು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರಿಂದ ಒಟ್ಟು 5.10 ಲಕ್ಷ ರೂ ಮೌಲ್ಯದ ಚಿನ್ನಭಾರಣಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದ್ದ ಎರಡು ಬೈಕ್​ಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್​ಐ ಜಾರ್ಜ್​ ಪ್ರಕಾಶ್​, ನರಸಿಂಹಯ್ಯ, ಸಿಬ್ಬಂದಿ ಮಹೇಶ್​, ಸುಜಾತ, ರವಿ ಎಚ್​.ಎನ್​, ಆಸೀಫ್  ಅಲಿ ಮೊಹಮದ್​ ಮಸೂತಿ, ನರೇಶ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net