ಪಂಪ್‌ಸೆಟ್ ಧ್ವಂಸಗೊಳಿಸಿದ್ದ ಮೂವರ ಬಂಧನ

MAY.. 4, HNP., PH.3.
Published on

ಹೊಳೆನರಸೀಪುರ: ಹಳೇ ದ್ವೇಷದ ಹಿನ್ನೆಲೆ ಪಂಪ್‌ಸೆಟ್ ಮನೆ ದೋಚಿ, ಧ್ವಂಸಗೊಳಿಸಿದ್ದ ಮೂವರನ್ನು ಶನಿವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ತಾಲೂಕಿನ ಗುಂಜೇವು ಗ್ರಾಮದ ನಿವಾಸಿಗಳಾದ ಮಂಜುನಾಥ, ಪ್ರದೀಪ ಹಾಗೂ ಸ್ವಾಮಿ ಬಂಧಿತರು.


ಗುಂಜೇವು ಗ್ರಾಮದ ಕಂಬೇಗೌಡ ಅವರ ಪುತ್ರ ಜಿ.ಕೆ.ಕುಮಾರ್ ಅವರ ತೋಟದ ಪಂಪ್‌ಸೆಟ್ ಮನೆ ಮೇಲೆ ಏ.21ರಂದು ಬಂಧಿತ ಮೂವರು ಸೇರಿದಂತೆ ಹಲವರು ದಾಳಿ ನಡೆಸಿ ಪಂಪ್‌ಸೆಟ್ ಮನೆಯ ಬೀಗ ಒಡೆದು ಅಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಮೋಟಾರ್, ಫುಟ್‌ಬಾಲ್, ಸ್ಟಾರ್ಟರ್, ಬೋಲ್ಟ್, ಕಂಡಸ್ಟರ್, ಜಿ.ಪಿ.ಪೈಪ್, ಕಳವು ಮಾಡಿ, ಪಂಪ್‌ಸೆಟ್ ನಾಶಗೊಳಿಸಿದ್ದರು.


ಕೃತ್ಯ ಸಂಬಂಧ ಜಿ.ಕೆ.ಕುಮಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಏ.4ರಂದು ಮಂಜುನಾಥ, ಪ್ರದೀಪ ಹಾಗೂ ಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಅರೋಪಿಗಳ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net