ಅಕೇಶಿಯಾ ನಾಟ ಸಾಗಿಸುತ್ತಿದ್ದವರ ಬಂಧನ

9sirsi6- NATA
Published on

ಶಿರಸಿ: ಅನಧಿಕೃತವಾಗಿ ಅಕೇಶಿಯಾ ಜಾತಿಯ ನಾಟಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಶಿರಸಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಎ.ಎಚ್. ಹಾಗೂ ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್. ನಾಯ್ಕ, ಶಿಲ್ಪಾ ನಾಯ್ಕ ಹಾಗೂ ತಂಡ ಹುಬ್ಬಳ್ಳಿ ರಸ್ತೆಯ ಹೊರವಲಯದಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ.

ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 92 ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಕೊಲ್ಲಾಪುರದ ಮಾದೇವ ವಡ್ಡ, ಶಿರಸಿಯ ಜಗದೀಶ ಗುಡಿಗಾರ ಎಂಬುವರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net