ಮೃತ ಪುನುಗು ಬೆಕ್ಕು ಸಾಗಿಸುತ್ತಿದ್ದವರ ಬಂಧನ

Published on

ಕನಕಪುರ: ತಾಲೂಕಿನ ಹಾರೋಬೆಲೆ ಸಮೀಪದ ಜ್ಯೋತಿನಗರದಲ್ಲಿ ಪುನುಗು ಬೆಕ್ಕಿನ ಕಳೇಬರ ಸಾಗಿಸುತ್ತಿದ್ದ ಆರೋಪದ ಮೇರೆಗೆ ಸಾತನೂರು ಅರಣ್ಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಅವರ ಬಳಿ ಇದ್ದ ಪುನುಗು ಬೆಕ್ಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜ್ಯೋತಿನಗರದ ವೆಂಕಟಪ್ಪ(45), ಡ್ಯಾನಿಯಲ್​(25) ಬಂಧಿತರು. ಗ್ರಾಮದಲ್ಲಿ ಶುಕ್ರವಾರ ಪುನುಗು ಬೆಕ್ಕಿನ ಕಳೇಬರವನ್ನು ಪ್ಲಾಸ್ಟಿಕ್​ ಬಕೆಟ್​ನಲ್ಲಿ ಇಟ್ಟು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸಾತನೂರು ವಲಯ ಅರಣ್ಯಾಧಿಕಾರಿ ಆಶಾರೆಡ್ಡಿ, ಡಿಆರ್​ಎಫ್​ಒ ಕೃಷ್ಣ, ಸಿಬ್ಬಂದಿ ಹನುಮಂತ, ಕಾಂತರಾಜು, ರಿಜ್ವಾನ್​ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ಪ್ರಕರಣ ದಾಖಲಿಸಿದ್ದರು.

ಕಾರಣಕ್ಕಾಗಿ ಈ ಕೃತ್ಯ ಮಾಡಿದ್ದರು, ಈ ಹಿಂದೆಯೂ ಇಂತಹ ಕೃತ್ಯಗಳನ್ನು ನಡೆಸಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net